SBI 9124 ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಅರ್ಜಿ ಅಹ್ವಾನ: SBI Recruitment 2026

SBI 9124 ಜೂನಿಯರ್ ಅಸೋಸಿಯೇಟ್ (ಕ್ಲರ್ಕ್) ಹುದ್ದೆಗಳಿಗೆ ಅರ್ಜಿ ಅಹ್ವಾನ: SBI Recruitment 2026

SBI Recruitment 2026: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ಖಾಲಿ ಇರುವ ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಪದವೀಧರ ಅಭ್ಯರ್ಥಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಆಕರ್ಷಕ ವೇತನ ಮತ್ತು ಬ್ಯಾಂಕಿಂಗ್ ಕ್ಷೇತ್ರದ ಸ್ಥಿರತೆಯೊಂದಿಗೆ ದೇಶದ ಅತಿ ದೊಡ್ಡ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಲು ಇಚ್ಛಿಸುವ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ತಕ್ಷಣವೇ ಅರ್ಜಿ ಸಲ್ಲಿಸಬಹುದು.

Telegram Channel Join Now

ಉದ್ಯೋಗ ವಿವರ

  • ನೇಮಕಾತಿ ಸಂಸ್ಥೆ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI)
  • ಹುದ್ದೆಗಳ ಹೆಸರು: ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್ & ಸೇಲ್ಸ್)
  • ಹುದ್ದೆಗಳ ಸಂಖ್ಯೆ: 9124 (7680 ಖಾಯಂ + 1444 ಬ್ಯಾಕ್‌ಲಾಗ್ ಹುದ್ದೆಗಳು)
  • ಉದ್ಯೋಗ ಸ್ಥಳ: ಭಾರತದಾದ್ಯಂತ (ಕರ್ನಾಟಕದಲ್ಲಿ 760 ಖಾಯಂ + 39 ಬ್ಯಾಕ್‌ಲಾಗ್ ಹುದ್ದೆಗಳು)
  • ಅರ್ಜಿ ಸಲ್ಲಿಸುವ ಬಗೆ: Online (ಆನ್‌ಲೈನ್)

ಹುದ್ದೆಗಳ ವಿವರ

  • ಜೂನಿಯರ್ ಅಸೋಸಿಯೇಟ್ (ಕರ್ನಾಟಕ – ಕನ್ನಡ ಭಾಷೆ): 760 ಖಾಯಂ ಹುದ್ದೆಗಳು
  • ಜೂನಿಯರ್ ಅಸೋಸಿಯೇಟ್ (ಕರ್ನಾಟಕ ಬ್ಯಾಕ್‌ಲಾಗ್): 39 ಹುದ್ದೆಗಳು
  • ಜೂನಿಯರ್ ಅಸೋಸಿಯೇಟ್ (ಇತರ ರಾಜ್ಯಗಳು): 8325 ಹುದ್ದೆಗಳು

ವಿದ್ಯಾರ್ಹತೆ

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿಂದ ಯಾವುದೇ ವಿಷಯದಲ್ಲಿ ಪದವಿ (Graduation) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು. ಪದವಿಯ ಅಂತಿಮ ವರ್ಷ ಅಥವಾ ಸೆಮೆಸ್ಟರ್‌ನಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಸಹ 31.12.2026 ಕ್ಕೆ ಮೊದಲು ಪದವಿ ಪೂರ್ಣಗೊಳಿಸುವ ಷರತ್ತಿಗೆ ಒಳಪಟ್ಟು ಅರ್ಜಿಯನ್ನು ಸಲ್ಲಿಸಬಹುದು. ಹಾಗೆಯೇ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಕನಿಷ್ಠ 15 ವರ್ಷಗಳ ಸೇವೆ ಸಲ್ಲಿಸಿ ಮ್ಯಾಟ್ರಿಕ್ಯುಲೇಷನ್ ಜತೆಗೆ ಸಶಸ್ತ್ರ ಪಡೆಗಳ ವಿಶೇಷ ಶಿಕ್ಷಣ ಪ್ರಮಾಣಪತ್ರ ಹೊಂದಿರುವ ಮಾಜಿ ಸೈನಿಕರು ಸಹ ಈ ಹುದ್ದೆಗೆ ಅರ್ಹರಾಗಿರುತ್ತಾರೆ.

ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ

ಅಭ್ಯರ್ಥಿಗಳ ವಯಸ್ಸು 01.04.2026 ಕ್ಕೆ ಅನ್ವಯಿಸುವಂತೆ ಕನಿಷ್ಠ 20 ವರ್ಷಗಳು ಮತ್ತು ಗರಿಷ್ಠ 28 ವರ್ಷಗಳ ಒಳಗಿರಬೇಕು (ಅಂದರೆ 02.04.1998 ರಕಿಂತ ಮುಂಚೆ ಹಾಗೂ 01.04.2006 ರಕಿಂತ ನಂತರ ಜನಿಸಿರಬಾರದು). ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ:

  • OBC ಅಭ್ಯರ್ಥಿಗಳಿಗೆ: 3 ವರ್ಷಗಳು
  • SC / ST ಅಭ್ಯರ್ಥಿಗಳಿಗೆ: 5 ವರ್ಷಗಳು
  • PwBD (General / EWS) ಅಭ್ಯರ್ಥಿಗಳಿಗೆ: 10 ವರ್ಷಗಳು
  • PwBD (OBC) ಅಭ್ಯರ್ಥಿಗಳಿಗೆ: 13 ವರ್ಷಗಳು
  • PwBD (SC / ST) ಅಭ್ಯರ್ಥಿಗಳಿಗೆ: 15 ವರ್ಷಗಳು
  • ಮಾಜಿ ಸೈನಿಕರು / ಅಂಗವಿಕಲ ಮಾಜಿ ಸೈನಿಕರು: ರಕ್ಷಣಾ ಸೇವೆಯ ಅವಧಿ + 3 ವರ್ಷಗಳು (ಗರಿಷ್ಠ 50 ವರ್ಷಗಳು)
  • ವಿಧವೆಯರು, ವಿಚ್ಛೇದಿತ ಮಹಿಳೆಯರಿಗೆ: 7 ವರ್ಷಗಳು (ಗರಿಷ್ಠ ವಯಸ್ಸು 35 ರಿಂದ 40 ವರ್ಷಗಳು)

ವೇತನಶ್ರೇಣಿ

ಆಯ್ಕೆಯಾದ ಜೂನಿಯರ್ ಅಸೋಸಿಯೇಟ್ ಹುದ್ದೆಯ ಅಭ್ಯರ್ಥಿಗಳಿಗೆ ಆರಂಭಿಕ ಮೂಲ ವೇತನ 26730 ರೂಪಾಯಿಗಳು (24050 ರೂಪಾಯಿ ಜತೆಗೆ ಪದವೀಧರರಿಗೆ ನೀಡಲಾಗುವ 2 ಹೆಚ್ಚುವರಿ ಇನ್‌ಕ್ರಿಮೆಂಟ್‌ಗಳು ಸೇರಿ). ಒಟ್ಟು ವೇತನ ಶ್ರೇಣಿ 24050-1340/3-28070-1650/3-33020-2000/4-41020-2340/7-57400-4400/1-61800-2680/1-64480 ಆಗಿರುತ್ತದೆ. ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಆರಂಭಿಕ ಒಟ್ಟು ವೇತನ ಮಾಸಿಕ ಸುಮಾರು 46000 ರೂಪಾಯಿಗಳಷ್ಟಿರುತ್ತದೆ. ಇದರೊಂದಿಗೆ ಮನೆ ಬಾಡಿಗೆ ಭತ್ಯೆ, ತುಟ್ಟಿಭತ್ಯೆ, ವೈದ್ಯಕೀಯ ಸೌಲಭ್ಯಗಳು ಮತ್ತು ಪಿಂಚಣಿ ಸೌಲಭ್ಯಗಳು ಲಭ್ಯವಿರುತ್ತವೆ.

ಅರ್ಜಿ ಶುಲ್ಕ

  • SC / ST / PwBD / XS / DXS ಅಭ್ಯರ್ಥಿಗಳಿಗೆ: ಶುಲ್ಕವಿಲ್ಲ (Nil)
  • General / OBC / EWS ಅಭ್ಯರ್ಥಿಗಳಿಗೆ: 750 ರೂಪಾಯಿಗಳು

ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್‌ಲೈನ್‌ನಲ್ಲಿ ಪಾವತಿಸಬೇಕಾಗುತ್ತದೆ. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ

ಅಭ್ಯರ್ಥಿಗಳು ಎಸ್‌ಬಿಐ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಮೊದಲು ಅಧಿಕೃತ ವೆಬ್‌ಸೈಟ್ ತೆರೆದು ‘Careers’ ವಿಭಾಗದಲ್ಲಿ ‘Recruitment of Junior Associates 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಹೊಸ ನೋಂದಣಿಗಾಗಿ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ ನಮೂದಿಸಿ ರಿಜಿಸ್ಟರ್ ಮಾಡಿಕೊಳ್ಳಿ.

ನಿಮಗೆ ಲಭ್ಯವಾಗುವ ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ, ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ಜಾಗರೂಕತೆಯಿಂದ ಭರ್ತಿ ಮಾಡಿ.

ಅಗತ್ಯವಿರುವ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳಿನ ಗುರುತು ಮತ್ತು ಕೈಬರಹದ ಘೋಷಣಾಪತ್ರವನ್ನು ನಿಗದಿಪಡಿಸಿದ ಅಳತೆಯಲ್ಲಿ ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

ನಿಮ್ಮ ವರ್ಗಕ್ಕೆ ಅನ್ವಯಿಸುವ ಅರ್ಜಿ ಶುಲ್ಕವನ್ನು ಆನ್‌ಲೈನ್ ಪಾವತಿ ವಿಧಾನದ ಮೂಲಕ ಪಾವತಿಸಿ.

ಅರ್ಜಿಯ ಪ್ರತಿಯನ್ನು ಸಲ್ಲಿಸುವ ಮೊದಲು ಎಲ್ಲಾ ವಿವರಗಳನ್ನು ಪರಿಶೀಲಿಸಿ, ಅಂತಿಮ ಸಬ್ಮಿಟ್ ನೀಡಿ ಹಾಗೂ ಭವಿಷ್ಯದ ಉಲ್ಲೇಖಕ್ಕಾಗಿ ಅರ್ಜಿ ನಮೂನೆಯ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಆಯ್ಕೆ ವಿಧಾನ

ನೇಮಕಾತಿಯ ಆಯ್ಕೆ ಪ್ರಕ್ರಿಯೆಯು ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲನೆಯದಾಗಿ 100 ಅಂಕಗಳಿಗೆ 1 ಗಂಟೆಯ ಅವಧಿಯ ಆನ್‌ಲೈನ್ ಪೂರ್ವಭಾವಿ ಪರೀಕ್ಷೆ (Preliminary Examination) ಇರುತ್ತದೆ. ಇದರಲ್ಲಿ ಇಂಗ್ಲಿಷ್, ನ್ಯೂಮರಿಕಲ್ ಎಬಿಲಿಟಿ ಮತ್ತು ರೀಸನಿಂಗ್ ಎಬಿಲಿಟಿ ವಿಷಯಗಳಿರುತ್ತವೆ. ಎರಡನೆಯದಾಗಿ ಪೂರ್ವಭಾವಿ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ 200 ಅಂಕಗಳ 2 ಗಂಟೆ 40 ನಿಮಿಷಗಳ ಆನ್‌ಲೈನ್ ಮುಖ್ಯ ಪರೀಕ್ಷೆ (Main Examination) ನಡೆಸಲಾಗುತ್ತದೆ. ಪ್ರತಿ ತಪ್ಪು ಉತ್ತರಕ್ಕೆ 1/4 ರಷ್ಟು ಋಣಾತ್ಮಕ (Negative) ಅಂಕಗಳನ್ನು ಕಳೆಯಲಾಗುತ್ತದೆ. ಮೂರನೆಯದಾಗಿ 10 ನೇ ಅಥವಾ 12 ನೇ ತರಗತಿಯಲ್ಲಿ ಸ್ಥಳೀಯ ಭಾಷೆಯನ್ನು ಓದದಿರುವ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪ್ರಾವೀಣ್ಯತಾ ಪರೀಕ್ಷೆ (Local Language Proficiency Test) ನಡೆಸಲಾಗುತ್ತದೆ. ಅಂತಿಮವಾಗಿ ಮುಖ್ಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

ಪ್ರಶ್ನೋತ್ತರಗಳು (FAQs)

ಎಸ್‌ಬಿಐ ಜೂನಿಯರ್ ಅಸೋಸಿಯೇಟ್ ಹುದ್ದೆಗೆ ಕನಿಷ್ಠ ಶೈಕ್ಷಣಿಕ ಅರ್ಹತೆ ಏನು?
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಪಡೆದಿರಬೇಕು. ಪದವಿಯ ಅಂತಿಮ ವರ್ಷದಲ್ಲಿದ್ದವರೂ ಸಹ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು?
ಅಭ್ಯರ್ಥಿಗಳ ವಯಸ್ಸು ಕನಿಷ್ಠ 20 ವರ್ಷ ಹಾಗೂ ಗರಿಷ್ಠ 28 ವರ್ಷಗಳಾಗಿರಬೇಕು. ನಿಯಮಾನುಸಾರ ಮೀಸಲಾತಿ ವರ್ಗಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.

ಪೂರ್ವಭಾವಿ ಪರೀಕ್ಷೆಯಲ್ಲಿ ಋಣಾತ್ಮಕ ಅಂಕಗಳು ಇರುತ್ತವೆಯೇ?
ಹೌದು, ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆ ಎರಡರಲ್ಲೂ ಪ್ರತಿಯೊಂದು ತಪ್ಪು ಉತ್ತರಕ್ಕೆ ನಿಗದಿತ ಅಂಕದ 1/4 ರಷ್ಟು ಅಂಕಗಳನ್ನು ಕಳೆಯಲಾಗುತ್ತದೆ.

ಕರ್ನಾಟಕದ ಅಭ್ಯರ್ಥಿಗಳಿಗೆ ಸ್ಥಳೀಯ ಭಾಷಾ ಪರೀಕ್ಷೆ ಕಡ್ಡಾಯವೇ?
10 ನೇ ಅಥವಾ 12 ನೇ ತರಗತಿಯಲ್ಲಿ ಕನ್ನಡ ಭಾಷೆಯನ್ನು ಒಂದು ವಿಷಯವಾಗಿ ವ್ಯಾಸಂಗ ಮಾಡಿ ಪ್ರಮಾಣಪತ್ರ ಹೊಂದಿರುವವರಿಗೆ ಭಾಷಾ ಪರೀಕ್ಷೆ ಇರುವುದಿಲ್ಲ. ಇಲ್ಲದಿದ್ದಲ್ಲಿ ಭಾಷಾ ಪರೀಕ್ಷೆ ತೇರ್ಗಡೆಯಾಗುವುದು ಕಡ್ಡಾಯ.

ಕರ್ನಾಟಕ ರಾಜ್ಯದಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?
ಕರ್ನಾಟಕ ರಾಜ್ಯದಲ್ಲಿ ಒಟ್ಟು 760 ಖಾಯಂ ಹುದ್ದೆಗಳು ಹಾಗೂ 39 ಬ್ಯಾಕ್‌ಲಾಗ್ ಹುದ್ದೆಗಳು ಖಾಲಿ ಇವೆ.

ಪ್ರಮುಖ ದಿನಾಂಕಗಳು

ವಿವರಗಳುದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆ ಮತ್ತು ಶುಲ್ಕ ಪಾವತಿ ಪ್ರಾರಂಭದ ದಿನಾಂಕ11.08.2026
ಆನ್‌ಲೈನ್ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ31.08.2026
ಪೂರ್ವಭಾವಿ ಪರೀಕ್ಷೆ (Preliminary Exam) ನಡೆಯಲ್ಲಿರುವ ತಾತ್ಕಾಲಿಕ ತಿಂಗಳುಸೆಪ್ಟೆಂಬರ್ 2026
ಮುಖ್ಯ ಪರೀಕ್ಷೆ (Main Exam) ನಡೆಯಲ್ಲಿರುವ ತಾತ್ಕಾಲಿಕ ತಿಂಗಳುನವೆಂಬರ್ 2026

ಪ್ರಮುಖ ಲಿಂಕುಗಳು

ವಿವರಗಳುಲಿಂಕ್
ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
Telegram Channel Join Now
Scroll to Top