ಕರ್ನಾಟಕ ಹೈಕೋರ್ಟ್ ನೇಮಕಾತಿ 2026: ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಅರ್ಜಿ ಅಹ್ವಾನ

ಕರ್ನಾಟಕ ಹೈಕೋರ್ಟ್ ನೇಮಕಾತಿ 2026: ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳಿಗೆ ಅರ್ಜಿ ಅಹ್ವಾನ

ಕರ್ನಾಟಕ ಹೈಕೋರ್ಟ್ ನೇಮಕಾತಿ 2026: ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಖಾಲಿ ಇರುವ ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗಳ ಭರ್ತಿಗೆ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಸರ್ಕಾರಿ ವಲಯದಲ್ಲಿ ಉತ್ತಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಪದವೀಧರ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದ್ದು, ನಿಗದಿತ ಕೊನೆಯ ದಿನಾಂಕದೊಳಗೆ ತಮ್ಮ ಅರ್ಜಿಗಳನ್ನು ಸಲ್ಲಿಸಿ ಈ ಅತ್ಯುತ್ತಮ ಅವಕಾಶದ ಸೌಲಭ್ಯವನ್ನು ಪಡೆದುಕೊಳ್ಳಬಹುದು.

Telegram Channel Join Now

ಉದ್ಯೋಗ ವಿವರ

  • ನೇಮಕಾತಿ ಸಂಸ್ಥೆ: ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು
  • ಹುದ್ದೆಗಳ ಹೆಸರು: ದ್ವಿತೀಯ ದರ್ಜೆ ಸಹಾಯಕರು (Second Division Assistant – SDA)
  • ಹುದ್ದೆಗಳ ಸಂಖ್ಯೆ: 20 (18 ಉಳಿದ ಮೂಲ ವೃಂದ + 2 ಕಲ್ಯಾಣ ಕರ್ನಾಟಕ ಹಿಂಬಾಕಿ ಹುದ್ದೆಗಳು)
  • ಉದ್ಯೋಗ ಸ್ಥಳ: ಬೆಂಗಳೂರು, ಧಾರವಾಡ ಅಥವಾ ಕಲಬುರಗಿ (ಕರ್ನಾಟಕ ಉಚ್ಚ ನ್ಯಾಯಾಲಯದ ಪೀಠಗಳು)
  • ಅರ್ಜಿ ಸಲ್ಲಿಸುವ ಬಗೆ: Online (ಆನ್‌ಲೈನ್)

ಹುದ್ದೆಗಳ ವಿವರ

  • ದ್ವಿತೀಯ ದರ್ಜೆ ಸಹಾಯಕರು (ಉಳಿದ ಮೂಲ ವೃಂದ – RPC): 18 ಹುದ್ದೆಗಳು
  • ದ್ವಿತೀಯ ದರ್ಜೆ ಸಹಾಯಕರು (ಕಲ್ಯಾಣ ಕರ್ನಾಟಕ ಪ್ರದೇಶ – KKR Backlog): 02 ಹುದ್ದೆಗಳು

ವಿದ್ಯಾರ್ಹತೆ

ಕರ್ನಾಟಕ ಉಚ್ಚ ನ್ಯಾಯಾಲಯದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ವಿಜ್ಞಾನ, ಕಲೆ, ವಾಣಿಜ್ಯ, ವ್ಯವಹಾರ ನಿರ್ವಹಣೆ (Business Management), ಕಂಪ್ಯೂಟರ್ ಅಪ್ಲಿಕೇಷನ್ಸ್ ಅಥವಾ ವ್ಯವಹಾರ ಆಡಳಿತ (Business Administration) ವಿಷಯದಲ್ಲಿ ಪದವಿ ಪಡೆದಿರಬೇಕು.
  • ಸಾಮಾನ್ಯ ವರ್ಗ ಹಾಗೂ ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ 55% ಅಂಕಗಳನ್ನು ಪಡೆದಿರಬೇಕು.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಅಭ್ಯರ್ಥಿಗಳು ಪದವಿಯಲ್ಲಿ ಕನಿಷ್ಠ 50% ಅಂಕಗಳನ್ನು ಪಡೆದಿರಬೇಕು.
  • ಇದರೊಂದಿಗೆ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ ಕಂಪ್ಯೂಟರ್ ನಿರ್ವಹಣೆಯ ಜ್ಞಾನವಿರಬೇಕು.

ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿಯ ವಿವರಗಳು ಈ ಕೆಳಗಿನಂತಿವೆ:

  • ಸಾಮಾನ್ಯ ಅರ್ಹತೆ (General Merit) ಅಭ್ಯರ್ಥಿಗಳಿಗೆ: 35 ವರ್ಷಗಳು + 5 ವರ್ಷ ಸಡಿಲಿಕೆ = 40 ವರ್ಷಗಳು
  • ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: 38 ವರ್ಷಗಳು + 5 ವರ್ಷ ಸಡಿಲಿಕೆ = 43 ವರ್ಷಗಳು
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಪ್ರವರ್ಗ-1 ಅಭ್ಯರ್ಥಿಗಳಿಗೆ: 40 ವರ್ಷಗಳು + 5 ವರ್ಷ ಸಡಿಲಿಕೆ = 45 ವರ್ಷಗಳು

ವಿಶೇಷ ಸೂಚನೆ: ಸರ್ಕಾರದ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಒಂದು ಬಾರಿಯ ಕ್ರಮವಾಗಿ 5 ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿದೆ.

ವೇತನಶ್ರೇಣಿ

ದ್ವಿತೀಯ ದರ್ಜೆ ಸಹಾಯಕ (SDA) ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ ₹25,500 ರಿಂದ ₹81,100 (ಲೆವೆಲ್ 4) ಹಾಗೂ ನಿಯಮಾನುಸಾರ ಸಿಗುವ ಇತರೆ ಭತ್ಯೆಗಳನ್ನು ನೀಡಲಾಗುತ್ತದೆ.

ಅರ್ಜಿ ಶುಲ್ಕ

  • ಸಾಮಾನ್ಯ ವರ್ಗ, ಪ್ರವರ್ಗ 2A, 2B, 3A, 3B ಅಭ್ಯರ್ಥಿಗಳಿಗೆ: ₹350
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ₹200

ಶುಲ್ಕ ಪಾವತಿಸುವ ವಿಧಾನ: ಅರ್ಜಿ ಶುಲ್ಕವನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆನ್‌ಲೈನ್ ಪಾವತಿ ಗೇಟ್‌ವೇ ಮೂಲಕ ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅಥವಾ ಯುಪಿಐ (UPI) ಬಳಸಿ ಪಾವತಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ

  1. ಉಚ್ಚ ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  2. ಮುಖಪುಟದಲ್ಲಿ ಲಭ್ಯವಿರುವ ‘Recruitment’ ವಿಭಾಗಕ್ಕೆ ತೆರಳಿ ದ್ವಿತೀಯ ದರ್ಜೆ ಸಹಾಯಕ ನೇಮಕಾತಿ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿಕೊಳ್ಳಿ.
  3. ಆನ್‌ಲೈನ್ ಅರ್ಜಿ ಲಿಂಕ್ ಮೇಲೆ ಕ್ಲಿಕ್ ಮಾಡಿ, ನಿಮ್ಮ ಮೂಲ ವಿವರಗಳು, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ನಮೂದಿಸಿ ನೋಂದಾಯಿಸಿಕೊಳ್ಳಿ.
  4. ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಮತ್ತು ಇತರೆ ಅಗತ್ಯ ಮಾಹಿತಿಯನ್ನು ನಿಖರವಾಗಿ ಭರ್ತಿ ಮಾಡಿ.
  5. ನಿಗದಿತ ಅಳತೆಯಲ್ಲಿ ಇತ್ತೀಚಿನ ಬಣ್ಣದ ಭಾವಚಿತ್ರ (ಗರಿಷ್ಠ 50 KB, ಬಿಳಿ ಹಿನ್ನೆಲೆ) ಮತ್ತು ಕಪ್ಪು ಬಾಲ್ ಪಾಯಿಂಟ್ ಪೆನ್‌ನಲ್ಲಿ ಮಾಡಿದ ಸಹಿಯನ್ನು (ಗರಿಷ್ಠ 25 KB) scan ಮಾಡಿ uplod ಮಾಡಿ.
  6. ಅರ್ಜಿ ನಮೂನೆಯಲ್ಲಿ ನಮೂದಿಸಿದ ಎಲ್ಲಾ ವಿವರಗಳನ್ನು ಮರುಪರಿಶೀಲಿಸಿ, ನಿಗದಿತ ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕ ಪಾವತಿಸಿ.
  7. ಅಂತಿಮವಾಗಿ ಅರ್ಜಿಯನ್ನು Submit ಮಾಡಿ, ಮುಂದಿನ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿ ಮತ್ತು ಶುಲ್ಕ ಪಾವತಿ ರಶೀದಿಯ ಪ್ರತಿಯನ್ನು ಪ್ರಿಂಟ್ ತೆಗೆದುಕೊಂಡು ಕಾಯ್ದಿರಿಸಿಕೊಳ್ಳಿ.

ಆಯ್ಕೆ ವಿಧಾನ

ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ಆಯ್ಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆ (90 ನಿಮಿಷಗಳ ಅವಧಿ) ಮತ್ತು ಸಂದರ್ಶನದ ಆಧಾರದ ಮೇಲೆ ಮಾಡಲಾಗುತ್ತದೆ.

  • ಅರ್ಹತಾ ಪರೀಕ್ಷೆಯಲ್ಲಿ (ಪದವಿ) ಗಳಿಸಿದ ಅಂಕಗಳ ಆಧಾರದ ಮೇಲೆ 1:10 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಕರೆಯಲಾಗುತ್ತದೆ.
  • ಸ್ಪರ್ಧಾತ್ಮಕ ಪರೀಕ್ಷೆಯು ಒಟ್ಟು 80 ಅಂಕಗಳಿಗೆ ನಡೆಯಲಿದ್ದು, ಇದರಲ್ಲಿ ಇಂಗ್ಲಿಷ್ ಪ್ರಬಂಧ (30 ಅಂಕ), ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ (30 ಅಂಕ) ಹಾಗೂ ಸಾಮಾನ್ಯ ಜ್ಞಾನ (20 ಅಂಕ) ವಿಷಯಗಳಿರುತ್ತವೆ.
  • ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳನ್ನು 1:5 ಅನುಪಾತದಲ್ಲಿ 20 ಅಂಕಗಳ ಸಂದರ್ಶನಕ್ಕೆ ಕರೆಯಲಾಗುತ್ತದೆ.
  • ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣರಾಗಲು ಒಟ್ಟು 100 ಅಂಕಗಳಲ್ಲಿ ಕನಿಷ್ಠ 60 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ.

ಪ್ರಶ್ನೋತ್ತರಗಳು (FAQs)

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 11.09.2026 ರಾತ್ರಿ 11:59 ರವರೆಗೆ ಅವಕಾಶವಿರುತ್ತದೆ.

ಅರ್ಜಿ ಸಲ್ಲಿಸಲು ಅಗತ್ಯವಿರುವ ಶೈಕ್ಷಣಿಕ ಅರ್ಹತೆ ಏನು?
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಹೊಂದಿರಬೇಕು ಹಾಗೂ ಕಂಪ್ಯೂಟರ್ ನಿರ್ವಹಣೆಯ ಜ್ಞಾನವಿರಬೇಕು.

ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ವೇತನ ಎಷ್ಟು?
ವೇತನ ಶ್ರೇಣಿ ₹25,500 ರಿಂದ ₹81,100 (ಲೆವೆಲ್ 4) ಇರಲಿದೆ.

ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತದೆ?
ಸ್ಪರ್ಧಾತ್ಮಕ ಪರೀಕ್ಷೆ (80 ಅಂಕಗಳು) ಮತ್ತು ನೇರ ಸಂದರ್ಶನ (20 ಅಂಕಗಳು) ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಎಷ್ಟಿರುತ್ತದೆ?
ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹200 ಇರುತ್ತದೆ.

ಪ್ರಮುಖ ದಿನಾಂಕಗಳು

ವಿವರಗಳುದಿನಾಂಕ
ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ13.08.2026
ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ11.09.2026 (ರಾತ್ರಿ 11:59)
ಆನ್‌ಲೈನ್ ಶುಲ್ಕ ಪಾವತಿಸಲು ಕೊನೆಯ ದಿನಾಂಕ11.09.2026

ಪ್ರಮುಖ ಲಿಂಕುಗಳು

ವಿವರಗಳುಲಿಂಕ್
ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
Telegram Channel Join Now
Scroll to Top