KPSC KAS Recruitment 2026: ಕರ್ನಾಟಕ ಲೋಕಸೇವಾ ಆಯೋಗವು (KPSC) ರಾಜ್ಯದ ಸರ್ಕಾರಿ ಸೇವೆಯ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಗೆಜೆಟೆಡ್ ಪ್ರೊಬೇಷನರ್ (KAS) ಹುದ್ದೆಗಳ ಭರ್ತಿಗೆ ಬೃಹತ್ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಒಟ್ಟು 319 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ರಾಜ್ಯ ಸರ್ಕಾರಿ ಸೇವೆಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸಲು ಬಯಸುವ ಸ್ಪರ್ಧಾಕಾಂಕ್ಷಿಗಳಿಗೆ ಇದೊಂದು ಅತ್ಯುತ್ತಮ ಅವಕಾಶವಾಗಿದೆ. ಈ ನೇಮಕಾತಿಗೆ ಸಂಬಂಧಿಸಿದ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ವಿಧಾನ ಮತ್ತು ಪ್ರಮುಖ ಲಿಂಕುಗಳ ಸಂಪೂರ್ಣ ವಿವರ ಇಲ್ಲಿದೆ.
ಉದ್ಯೋಗ ವಿವರ
- ನೇಮಕಾತಿ ಸಂಸ್ಥೆ: ಕರ್ನಾಟಕ ಲೋಕಸೇವಾ ಆಯೋಗ (KPSC)
- ಹುದ್ದೆಗಳ ಹೆಸರು: ಗೆಜೆಟೆಡ್ ಪ್ರೊಬೇಷನರ್ಸ್ (ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’)
- ಹುದ್ದೆಗಳ ಸಂಖ್ಯೆ: 319
- ಉದ್ಯೋಗ ಸ್ಥಳ: ಕರ್ನಾಟಕ
- ಅರ್ಜಿ ಸಲ್ಲಿಸುವ ಬಗೆ: Online
ಹುದ್ದೆಗಳ ವಿವರ
ಗ್ರೂಪ್ ‘ಎ’ ಹುದ್ದೆಗಳು (ಒಟ್ಟು 117):
- ಸಹಾಯಕ ಆಯುಕ್ತರು (ಕಿರಿಯ ಶ್ರೇಣಿ) – ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ: 39
- ವಾಣಿಜ್ಯ ತೆರಿಗೆಗಳ ಸಹಾಯಕ ಆಯುಕ್ತರು – ವಾಣಿಜ್ಯ ತೆರಿಗೆ ಇಲಾಖೆ: 50
- ಸಹಾಯಕ ನಿರ್ದೇಶಕರು – ಖಜಾನೆ ಇಲಾಖೆ: 2
- ಕಾರ್ಯನಿರ್ವಾಹಕ ಅಧಿಕಾರಿ/ಸಹಾಯಕ ಕಾರ್ಯದರ್ಶಿ – RDPR ಇಲಾಖೆ: 15
- ಸಹಾಯಕ ನಿರ್ದೇಶಕರು ಗ್ರೇಡ್-1 – ಸಮಾಜ ಕಲ್ಯಾಣ ಇಲಾಖೆ: 11
ಗ್ರೂಪ್ ‘ಬಿ’ ಹುದ್ದೆಗಳು (ಒಟ್ಟು 202):
- ತಹಶೀಲ್ದಾರ್ ಗ್ರೇಡ್-2 – ಕಂದಾಯ ಇಲಾಖೆ: 25
- ವಾಣಿಜ್ಯ ತೆರಿಗೆ ಅಧಿಕಾರಿ – ವಾಣಿಜ್ಯ ತೆರಿಗೆ ಇಲಾಖೆ: 74
- ಸಹಾಯಕ ಅಧೀಕ್ಷಕರು – ಕಾರಾಗೃಹ ಇಲಾಖೆ: 6
- ಸಹಕಾರ ಸಂಘಗಳ ಸಹಾಯಕ ನಿಬಂಧಕರು – ಸಹಕಾರ ಇಲಾಖೆ: 21
- ಸಹಾಯಕ ನಿರ್ದೇಶಕರು – ಕೃಷಿ ಮಾರಾಟ ಇಲಾಖೆ: 12
- ಅಬಕಾರಿ ಉಪ ಅಧೀಕ್ಷಕರು – ಆರ್ಥಿಕ ಇಲಾಖೆ: 5
- ಉದ್ಯೋಗಾಧಿಕಾರಿ – ಕೌಶಲ್ಯಾಭಿವೃದ್ಧಿ ಇಲಾಖೆ: 3
- ಮುಖ್ಯಾಧಿಕಾರಿ ಗ್ರೇಡ್-1 – ನಗರಾಭಿವೃದ್ಧಿ ಇಲಾಖೆ: 20
- ಸಹಾಯಕ ಖಜಾನಾಧಿಕಾರಿ – ಆರ್ಥಿಕ ಇಲಾಖೆ: 12
- ಸಹಾಯಕ ನಿರ್ದೇಶಕರು – ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: 4
- ಶಾಖಾಧಿಕಾರಿ – ಕರ್ನಾಟಕ ಸರ್ಕಾರದ ಸಚಿವಾಲಯ: 5
- ಶಾಖಾಧಿಕಾರಿ – KPSC: 4
- ಸಹಾಯಕ ನಿರ್ದೇಶಕರು ಗ್ರೇಡ್-2 – ಸಮಾಜ ಕಲ್ಯಾಣ ಇಲಾಖೆ: 11
ವಿದ್ಯಾರ್ಹತೆ
ಅಭ್ಯರ್ಥಿಗಳು ಭಾರತದಲ್ಲಿ ಕಾನೂನುಬದ್ಧವಾಗಿ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ (Bachelor’s Degree) ಅಥವಾ ಸ್ನಾತಕೋತ್ತರ ಪದವಿ (Master’s Degree) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅಂತಿಮ ವರ್ಷದ ಪರೀಕ್ಷೆಗೆ ಹಾಜರಾಗಿ ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಸಹ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳು ಕನಿಷ್ಠ 21 ವರ್ಷ ವಯಸ್ಸನ್ನು ಪೂರೈಸಿರಬೇಕು.
ಗರಿಷ್ಠ ವಯೋಮಿತಿ ವಿವರ:
- ಸಾಮಾನ್ಯ ಅರ್ಹತೆ (GM): 40 ವರ್ಷಗಳು
- ಪ್ರವರ್ಗ 2ಎ, 2ಬಿ, 3ಎ, 3ಬಿ: 43 ವರ್ಷಗಳು
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1: 45 ವರ್ಷಗಳು
ವಿಶೇಷ ಸೂಚನೆ: ಸರ್ಕಾರದ ಆದೇಶದಂತೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಒಮ್ಮಾರೆಯ ಸಡಿಲಿಕೆಯಾಗಿ 5 ವರ್ಷಗಳ ವಯೋಸಡಿಲಿಕೆಯನ್ನು ನೀಡಲಾಗಿದೆ. ಇದಲ್ಲದೆ ಮಾಜಿ ಸೈನಿಕರಿಗೆ ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ನಿಯಮಾನುಸಾರ ಹೆಚ್ಚುವರಿ ವಯೋಸಡಿಲಿಕೆ ಸಿಗಲಿದೆ.
ವೇತನಶ್ರೇಣಿ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕ ಸರ್ಕಾರದ ನಿಯಮಾವಳಿಗಳ ಪ್ರಕಾರ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ನಿಗದಿತ ವೇತನಶ್ರೇಣಿ ಹಾಗೂ ಇತರೆ ಭತ್ಯೆಗಳು ಲಭ್ಯವಿರುತ್ತವೆ.
ಅರ್ಜಿ ಶುಲ್ಕ
- ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: 600
- ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಅಭ್ಯರ್ಥಿಗಳಿಗೆ: 300
- ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
- KPSC ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಮತ್ತು “New Registration” ಲಿಂಕ್ ಕ್ಲಿಕ್ ಮಾಡಿ ಒಮ್ಮೆ ಬಾರಿಯ ನೋಂದಣಿ (OTR) ಪೂರ್ಣಗೊಳಿಸಿ.
- ನಿಮ್ಮ ಲಾಗಿನ್ ರುಜುವಾತುಗಳೊಂದಿಗೆ (User ID ಮತ್ತು Password) ಲಾಗ್ ಇನ್ ಆಗಿ.
- ನಿಮ್ಮ ಶೈಕ್ಷಣಿಕ, ವೈಯಕ್ತಿಕ ವಿವರಗಳು ಹಾಗೂ ಅಗತ್ಯ ಮೀಸಲಾತಿ ಪ್ರಮಾಣಪತ್ರಗಳನ್ನು ಸರಿಯಾಗಿ ಭರ್ತಿ ಮಾಡಿ.
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ (200 KB ಒಳಗೆ) ಮತ್ತು ಸಹಿಯನ್ನು (70 KB ಒಳಗೆ) JPEG/JPG ಮಾದರಿಯಲ್ಲಿ ಅಪ್ಲೋಡ್ ಮಾಡಿ.
- ಎಲ್ಲಾ ವಿವರಗಳನ್ನು ಪರಿಶೀಲಿಸಿ, “Apply to Post” ಆಯ್ಕೆಯನ್ನು ಕ್ಲಿಕ್ ಮಾಡಿ.
- ನಿಗದಿತ ಅರ್ಜಿ ಶುಲ್ಕವನ್ನು Net Banking, Debit Card, Credit Card ಅಥವಾ UPI ಮೂಲಕ ಪಾವತಿಸಿ.
- ಅರ್ಜಿ ಸಲ್ಲಿಕೆ ಪೂರ್ಣಗೊಂಡ ನಂತರ ಸ್ವೀಕೃತಿ ಪ್ರತಿಯನ್ನು (Application Form) ಡೌನ್ಲೋಡ್ ಮಾಡಿ ಪ್ರಿಂಟ್ ತೆಗೆದುಕೊಂಡು ಕಾಯ್ದಿರಿಸಿಕೊಳ್ಳಿ.
ಆಯ್ಕೆ ವಿಧಾನ
ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಕರ್ನಾಟಕ ಗೆಜೆಟೆಡ್ ಪ್ರೊಬೇಷನರ್ಸ್ ನಿಯಮಗಳ ಪ್ರಕಾರ ಕೆಳಗಿನ ಹಂತಗಳನ್ನು ಒಳಗೊಂಡಿರುತ್ತದೆ:
- ಹಂತ 1: ಪೂರ್ವಭಾವಿ ಪರೀಕ್ಷೆ
- ಹಂತ 2: ಮುಖ್ಯ ಪರೀಕ್ಷೆ
- ಹಂತ 3: ವ್ಯಕ್ತಿತ್ವ ಪರೀಕ್ಷೆ
ಪ್ರಶ್ನೋತ್ತರಗಳು (FAQs)
ಅರ್ಜಿ ಸಲ್ಲಿಸಲು ಕನಿಷ್ಠ ವಿದ್ಯಾರ್ಹತೆ ಏನು?
ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ (Bachelor’s Degree) ಪೂರ್ಣಗೊಳಿಸಿರಬೇಕು.
ಪೂರ್ವಭಾವಿ ಪರೀಕ್ಷೆಯಲ್ಲಿ ಋಣಾತ್ಮಕ ಮೌಲ್ಯಮಾಪನ (Negative Marking) ಇದೆಯೇ?
ಹೌದು, ಪೂರ್ವಭಾವಿ ಪರೀಕ್ಷೆಯ ಪ್ರತಿಯೊಂದು ತಪ್ಪು ಉತ್ತರಕ್ಕೆ 0.25 ರಷ್ಟು ಅಂಕಗಳನ್ನು ಕಳೆಯಲಾಗುವುದು.
ಅಂತಿಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದೇ?
ಹೌದು, ಅಂತಿಮ ವರ್ಷದ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕವನ್ನು ಹೇಗೆ ಪಾವತಿಸಬೇಕು?
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ UPI ಬಳಸಿ ಪಾವತಿಸಬಹುದು.
ಪೂರ್ವಭಾವಿ ಪರೀಕ್ಷೆಯು ಯಾವ ಮಾಧ್ಯಮದಲ್ಲಿ ಇರುತ್ತದೆ?
ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಇರುತ್ತದೆ.
ಪ್ರಮುಖ ದಿನಾಂಕಗಳು
| ವಿವರ | ದಿನಾಂಕ |
| ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ | 01-08-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 31-08-2026 |
| ಪೂರ್ವಭಾವಿ ಪರೀಕ್ಷಾ ದಿನಾಂಕ (ತಾತ್ಕಾಲಿಕ) | 15-11-2026 |
- ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 1828 ಹುದ್ದೆಗಳು
- SDA, ಕಂಪ್ಯೂಟರ್ ಆಪರೇಟರ್ ಹಾಗೂ ಪ್ಯೂನ್ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಅಹ್ವಾನ: 04-08-2026
- ಸಹಕಾರಿ ಬ್ಯಾಂಕ್ ನೇಮಕಾತಿ 2026 – 11-08-2026
- ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ನೇಮಕಾತಿ 2026 – 19-08-2026
- ಆಧಾರ್ ಸೇವಾ ಕೇಂದ್ರ ನೇಮಕಾತಿ 2026 – 20-08-2026
- ಡಿಸಿ ಕಚೇರಿ ನೇರ ನೇಮಕಾತಿ 2026 – 21-08-2026
- ಜಿಲ್ಲಾ ನ್ಯಾಯಾಲಯ ನೇಮಕಾತಿ 2026: 56 ಜವಾನ ಹುದ್ದೆಗಳಿಗೆ ಅರ್ಜಿ ಆಹ್ವಾನ – 24-08-2028
- ಡಿಸಿಸಿ ಬ್ಯಾಂಕ್ ನೇಮಕಾತಿ 2026 – 27-08-2026
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026: 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ! – 31.08.2026
- ಜಿಲ್ಲಾ ನ್ಯಾಯಾಲಯ ನೇಮಕಾತಿ 2026 – 31.08.2026
ಪ್ರಮುಖ ಲಿಂಕುಗಳು
| ವಿವರ | ಲಿಂಕ್ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಂ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |









