Belagavi DCC Bank Recruitment 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಇಲ್ಲಿದೆ ಒಂದು ಉತ್ತಮ ಸುವರ್ಣಾವಕಾಶ. ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ., ಬೆಳಗಾವಿ ತನ್ನ ವಿವಿಧ ವೃಂದಗಳಲ್ಲಿ ಖಾಲಿ ಇರುವ ಒಟ್ಟು 104 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿದೆ. ಈ ಉದ್ಯೋಗಾವಕಾಶದ ಕುರಿತು ವಯೋಮಿತಿ, ವಿದ್ಯಾರ್ಹತೆ, ಆಯ್ಕೆ ವಿಧಾನ ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ವಿವರವಾದ ಮಾಹಿತಿಯನ್ನು ಕೆಳಗೆ ನೀಡಲಾಗಿದೆ.
ಉದ್ಯೋಗ ವಿವರ
- ನೇಮಕಾತಿ ಸಂಸ್ಥೆ: ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ., ಬೆಳಗಾವಿ
- ಹುದ್ದೆಗಳ ಹೆಸರು: ದ್ವಿತೀಯ ದರ್ಜೆ ಗುಮಾಸ್ತರು, ಬಂದೂಕುಧಾರಿ (ಗನ್‌ಮ್ಯಾನ್), ಸಿಪಾಯಿ
- ಹುದ್ದೆಗಳ ಸಂಖ್ಯೆ: 104
- ಉದ್ಯೋಗ ಸ್ಥಳ: ಬೆಳಗಾವಿ (ಕರ್ನಾಟಕ)
- ಅರ್ಜಿ ಸಲ್ಲಿಸುವ ಬಗೆ: ಆನ್‌ಲೈನ್ (Online)
ಹುದ್ದೆಗಳ ವಿವರ
- ದ್ವಿತೀಯ ದರ್ಜೆ ಗುಮಾಸ್ತರು (Second Division Clerks): 83
- ಬಂದೂಕುಧಾರಿ (Gun Man): 01
- ಸಿಪಾಯಿ (Peons): 20
ವಿದ್ಯಾರ್ಹತೆ
- ದ್ವಿತೀಯ ದರ್ಜೆ ಗುಮಾಸ್ತರು: ಅಂಗೀಕೃತ ವಿಶ್ವವಿದ್ಯಾಲಯದಿಂದ ಬಿ.ಎ / ಬಿ.ಎಸ್ಸಿ / ಬಿ.ಕಾಂ. ಪದವಿ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಕಂಪ್ಯೂಟರ್ ಆಪರೇಶನ್ಸ್ ಮತ್ತು ಅಪ್ಲಿಕೇಷನ್ಸ್ ಜ್ಞಾನ ಕಡ್ಡಾಯ (ಪದವಿಯಲ್ಲಿ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದ್ದರೆ ಕಂಪ್ಯೂಟರ್ ಸರ್ಟಿಫಿಕೇಟ್‌ನಿಂದ ವಿನಾಯಿತಿ ಇರುತ್ತದೆ).
- ಬಂದೂಕುಧಾರಿ (ಗನ್‌ಮ್ಯಾನ್): SSLC / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಜೊತೆಗೆ ಭಾರತೀಯ ಸಶಸ್ತ್ರ ಪಡೆಗಳಿಂದ ನಿವೃತ್ತರಾದ ಮಾಜಿ ಸೈನಿಕರಾಗಿರಬೇಕು ಹಾಗೂ ಚಾಲ್ತಿಯಲ್ಲಿರುವ ಬಂದೂಕು ಪರವಾನಗಿ (Valid Arm License) ಹೊಂದಿರಬೇಕು.
- ಸಿಪಾಯಿ: SSLC / 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಮತ್ತು ಎಲ್ಲಾ ಹುದ್ದೆಗಳಿಗೆ ಕನ್ನಡ ಭಾಷಾ ಜ್ಞಾನ (ಓದುವುದು, ಬರೆಯುವುದು, ಅರ್ಥೈಸಿಕೊಳ್ಳುವುದು ಮತ್ತು ಸ್ಪಷ್ಟವಾಗಿ ಮಾತನಾಡುವುದು) ಕಡ್ಡಾಯವಾಗಿರುತ್ತದೆ.
ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಗಳು ಕನಿಷ್ಠ 18 ವರ್ಷ ವಯೋಮಿತಿ ಪೂರೈಸಿರಬೇಕು. ಗರಿಷ್ಠ ವಯೋಮಿತಿ ವಿವರ ಕೆಳಗಿನಂತಿದೆ:
- ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ: ಗರಿಷ್ಠ 35 ವರ್ಷಗಳು.
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ: ಗರಿಷ್ಠ 38 ವರ್ಷಗಳು.
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ: ಗರಿಷ್ಠ 40 ವರ್ಷಗಳು.
ವೇತನಶ್ರೇಣಿ
- ದ್ವಿತೀಯ ದರ್ಜೆ ಗುಮಾಸ್ತರು: 53150 – 115150 ರೂ.
- ಬಂದೂಕುಧಾರಿ (ಗನ್‌ಮ್ಯಾನ್): 47650 – 105650 ರೂ.
- ಸಿಪಾಯಿ: 42650 – 96650 ರೂ.
ಅರ್ಜಿ ಶುಲ್ಕ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ: 500 ರೂ. (ಪ್ಲಸ್ ಬ್ಯಾಂಕ್ ಗೇಟ್‌ವೇ ಶುಲ್ಕ)
- ಇತರೆ ವರ್ಗದ (ಸಾಮಾನ್ಯ, 2ಎ, 2ಬಿ, 3ಎ, 3ಬಿ) ಅಭ್ಯರ್ಥಿಗಳಿಗೆ: 1000 ರೂ. (ಪ್ಲಸ್ ಬ್ಯಾಂಕ್ ಗೇಟ್‌ವೇ ಶುಲ್ಕ)
- ಶುಲ್ಕ ಪಾವತಿಸುವ ವಿಧಾನ: ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. (ಡಿಡಿ/ಚೆಕ್/ಅಂಚೆ ಆರ್ಡರ್ ಮೂಲಕ ಪಾವತಿಗೆ ಅವಕಾಶವಿಲ್ಲ).
ಅರ್ಜಿ ಸಲ್ಲಿಸುವ ವಿಧಾನ
- ಮೊದಲು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಹಾಗೂ ನೇಮಕಾತಿ ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಳ್ಳಿ.
- ಅರ್ಜಿಯ ನಿಬಂಧನೆಗಳನ್ನು ಒಪ್ಪಿಕೊಂಡು “Open Application” ಬಟನ್ ಕ್ಲಿಕ್ ಮಾಡಿ.
- ನೀವು ಅರ್ಜಿ ಸಲ್ಲಿಸಲು ಇಚ್ಛಿಸುವ ಹುದ್ದೆಯನ್ನು ಆಯ್ಕೆ ಮಾಡಿ “Apply” ಬಟನ್ ಕ್ಲಿಕ್ ಮಾಡಿ ಮತ್ತು ವೈಯಕ್ತಿಕ ಹಾಗೂ ಶೈಕ್ಷಣಿಕ ವಿವರಗಳನ್ನು ನಮೂದಿಸಿ.
- ವಿವರಗಳನ್ನು ಪರಿಶೀಲಿಸಿದ ನಂತರ ನಿಮ್ಮ ಇತ್ತೀಚಿನ ಬಿಳಿ ಹಿನ್ನೆಲೆಯುಳ್ಳ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ಸಹಿಯನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಅಗತ್ಯ ಶೈಕ್ಷಣಿಕ, ಜಾತಿ ಹಾಗೂ ಇತರ ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ (Self-attested) ಪ್ರತಿಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.
- ಆನ್‌ಲೈನ್ ಇ-ಪಾವತಿ ಗೇಟ್‌ವೇ ಮೂಲಕ ನಿಗದಿತ ಅರ್ಜಿ ಶುಲ್ಕವನ್ನು ಪಾವತಿಸಿ.
- ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಂಡ ನಂತರ ಅರ್ಜಿಯ ಪ್ರತಿಯನ್ನು (Print Application) ಡೌನ್‌ಲೋಡ್ ಮಾಡಿಕೊಂಡು ಭವಿಷ್ಯದ ಉಲ್ಲೇಖಕ್ಕಾಗಿ ಇಟ್ಟುಕೊಳ್ಳಿ.
ಆಯ್ಕೆ ವಿಧಾನ
- ದ್ವಿತೀಯ ದರ್ಜೆ ಗುಮಾಸ್ತ ಹುದ್ದೆಗೆ: ಒಟ್ಟು 200 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ (ಕನ್ನಡ: 50, ಇಂಗ್ಲಿಷ್: 25, ಸಾಮಾನ್ಯ ಜ್ಞಾನ: 25, ಸಹಕಾರ ವಿಷಯ: 50, ಸಂವಿಧಾನ: 25, ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳು: 25).
- ಸಿಪಾಯಿ ಮತ್ತು ಗನ್‌ಮ್ಯಾನ್ ಹುದ್ದೆಗಳಿಗೆ: ಒಟ್ಟು 100 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ (ಕನ್ನಡ: 50, ಸಾಮಾನ್ಯ ಜ್ಞಾನ: 50).
- ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ 1:5 ರ ಅನುಪಾತದಲ್ಲಿ ಅಭ್ಯರ್ಥಿಗಳನ್ನು 15 ಅಂಕಗಳ ಮೌಖಿಕ ಸಂದರ್ಶನಕ್ಕೆ ಕರೆಯಲಾಗುತ್ತದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಅಂಕಗಳನ್ನು ಆಧರಿಸಿ ಅಂತಿಮ ಮೆರಿಟ್ ಪಟ್ಟಿಯನ್ನು ತಯಾರಿಸಿ ಆಯ್ಕೆ ಮಾಡಲಾಗುತ್ತದೆ.
ಪ್ರಶ್ನೋತ್ತರಗಳು (FAQs)
ಬೆಳಗಾವಿ ಡಿಸಿಸಿ ಬ್ಯಾಂಕ್ ನೇಮಕಾತಿಯ ಒಟ್ಟು ಖಾಲಿ ಹುದ್ದೆಗಳು ಎಷ್ಟು?
ಒಟ್ಟು 104 ಹುದ್ದೆಗಳು ಖಾಲಿ ಇವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅರ್ಜಿ ಸಲ್ಲಿಸಲು 27-08-2026 ಕೊನೆಯ ದಿನಾಂಕವಾಗಿದೆ.
ಸಿಪಾಯಿ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಏನು?
SSLC ಅಥವಾ 10ನೇ ತರಗತಿ ತೇರ್ಗಡೆಯಾಗಿರಬೇಕು.
ಅರ್ಜಿಗಳನ್ನು ಅಂಚೆ ಮೂಲಕ ಕಳುಹಿಸಬಹುದೇ?
ಇಲ್ಲ, ಅರ್ಜಿಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕವೇ ಸಲ್ಲಿಸಬೇಕು. ಅಂಚೆ ಅಥವಾ ಖುದ್ದಾಗಿ ಸಲ್ಲಿಸುವ ಅರ್ಜಿಗಳನ್ನು ಪುರಸ್ಕರಿಸಲಾಗುವುದಿಲ್ಲ.
ಪದವಿಯಲ್ಲಿ ಕಂಪ್ಯೂಟರ್ ಓದಿದವರಿಗೆ ಕಂಪ್ಯೂಟರ್ ಪ್ರಮಾಣಪತ್ರ ಕಡ್ಡಾಯವೇ?
ಇಲ್ಲ, ಪದವಿಯಲ್ಲಿ ಕನಿಷ್ಠ ಒಂದು ಕೋರ್ಸ್ ಕಂಪ್ಯೂಟರ್ ವಿಷಯ ಅಧ್ಯಯನ ಮಾಡಿದ್ದರೆ ಕಂಪ್ಯೂಟರ್ ಸರ್ಟಿಫಿಕೇಟ್‌ನಿಂದ ವಿನಾಯಿತಿ ಇರುತ್ತದೆ.
ಪ್ರಮುಖ ದಿನಾಂಕಗಳು
| ವಿವರ | ದಿನಾಂಕ |
| ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ | 27-07-2026 |
| ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 27-08-2026 |
| ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ | 27-08-2026 |
- ಕರ್ನಾಟಕ ಅಗ್ನಿಶಾಮಕ ಇಲಾಖೆ ನೇಮಕಾತಿ: 1828 ಹುದ್ದೆಗಳು
- ಕರ್ನಾಟಕ ಹೈ ಕೋರ್ಟ್ ನಲ್ಲಿ ಡೇಟಾ ಎಂಟ್ರಿ ಅಸಿಸ್ಟಂಟ್ ಹುದ್ದೆಗಳು – 28 ಜುಲೈ 2026
- ರೈಲ್ವೇ ಇಲಾಖೆಯಲ್ಲಿ 6557 ಹುದ್ದೆಗಳ ಭರ್ಜರಿ ನೇಮಕಾತಿ 2026 – 29.07.2026
- ಅಂಗನವಾಡಿ ನೇಮಕಾತಿ 2026: 168 ಹುದ್ದೆಗಳು – 30-07-2026
- ಬೆಂಗಳೂರು ಸಿವಿಲ್ ನ್ಯಾಯಾಲಯ ನೇಮಕಾತಿ 2026 – 30-07-2026
- SDA, ಕಂಪ್ಯೂಟರ್ ಆಪರೇಟರ್ ಹಾಗೂ ಪ್ಯೂನ್ ಹುದ್ದೆಗಳಿಗೆ ನೇರ ಸಂದರ್ಶನಕ್ಕೆ ಅರ್ಜಿ ಅಹ್ವಾನ: 04-08-2026
- ಡಿಸಿ ಕಚೇರಿ ನೇರ ನೇಮಕಾತಿ 2026 – 21-08-2026
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026: 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ! – 31.08.2026
ಪ್ರಮುಖ ಲಿಂಕುಗಳು
| ವಿವರ | ಲಿಂಕ್ |
| ಅಧಿಕೃತ ವೆಬ್‌ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |









