ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026: 1100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026: 1100 ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ ನೇಮಕಾತಿ 2026: ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉನ್ನತ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ಬಯಸುವ ಅಭ್ಯರ್ಥಿಗಳಿಗೆ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಆಫ್ ಬರೋಡಾ ಅತ್ಯುತ್ತಮ ಅವಕಾಶವನ್ನು ಕಲ್ಪಿಸಿದೆ. ಬ್ಯಾಂಕ್‌ನಲ್ಲಿ ಖಾಲಿ ಇರುವ 1100 ವೆಲ್ತ್ ಎಕ್ಸಿಕ್ಯೂಟಿವ್ ಹಾಗೂ ಕ್ರೆಡಿಟ್ ಅನಲಿಸ್ಟ್ ಹುದ್ದೆಗಳ ಭರ್ತಿಗಾಗಿ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಕರ್ಷಕ ವೇತನ, ಉತ್ತಮ ಭವಿಷ್ಯ ಮತ್ತು ವೃತ್ತಿ ಬೆಳವಣಿಗೆಯನ್ನು ಬಯಸುವ ಪದವೀಧರರಿಗೆ ಇದೊಂದು ಸುವರ್ಣಾವಕಾಶವಾಗಿದೆ.

Telegram Channel Join Now

ಉದ್ಯೋಗ ವಿವರ

  • ನೇಮಕಾತಿ ಸಂಸ್ಥೆ: ಬ್ಯಾಂಕ್ ಆಫ್ ಬರೋಡಾ
  • ಹುದ್ದೆಗಳ ಹೆಸರು: ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್
  • ಹುದ್ದೆಗಳ ಸಂಖ್ಯೆ: 1100 ಹುದ್ದೆಗಳು
  • ಉದ್ಯೋಗ ಸ್ಥಳ: ಭಾರತದಾದ್ಯಂತ (ಬ್ಯಾಂಕಿನ ಅಗತ್ಯತೆಗೆ ಅನುಗುಣವಾಗಿ ನಿಯೋಜನೆ)
  • ಅರ್ಜಿ ಸಲ್ಲಿಸುವ ಬಗೆ: ಆನ್‌ಲೈನ್

ಹುದ್ದೆಗಳ ವಿವರ

  • ವೆಲ್ತ್ ಎಕ್ಸಿಕ್ಯೂಟಿವ್: 1000 ಹುದ್ದೆಗಳು (ಸಾಮಾನ್ಯ ವರ್ಗ: 405, ಹಿಂದುಳಿದ ವರ್ಗ: 270, ಪರಿಶಿಷ್ಟ ಜಾತಿ: 150, ಆರ್ಥಿಕವಾಗಿ ಹಿಂದುಳಿದ ವರ್ಗ: 100, ಪರಿಶಿಷ್ಟ ಪಂಗಡ: 75, ವಿಕಲಚೇತನರಿಗೆ: 40)
  • ಕ್ರೆಡಿಟ್ ಅನಲಿಸ್ಟ್ – ಕಾರ್ಪೊರೇಟ್ ಮತ್ತು ಇನ್‌ಸ್ಟಿಟ್ಯೂಷನಲ್ ಕ್ರೆಡಿಟ್: 100 ಹುದ್ದೆಗಳು (ಸಾಮಾನ್ಯ ವರ್ಗ: 40, ಹಿಂದುಳಿದ ವರ್ಗ: 27, ಪರಿಶಿಷ್ಟ ಜಾತಿ: 15, ಆರ್ಥಿಕವಾಗಿ ಹಿಂದುಳಿದ ವರ್ಗ: 10, ಪರಿಶಿಷ್ಟ ಪಂಗಡ: 8, ವಿಕಲಚೇತನರಿಗೆ: 4)

ವಿದ್ಯಾರ್ಹತೆ

ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು. ಜೊತೆಗೆ ಭಾರತೀಯ ವಿಮಾ ಸಂಸ್ಥೆಯ ಐಸಿ 38, ಎನ್ಐಎಸ್ಎಂ ಸರಣಿ 5-ಎ, ಎನ್ಐಎಸ್ಎಂ ಸರಣಿ 21-ಎ ಅಥವಾ ಎನ್ಐಎಸ್ಎಂ ಸರಣಿ 5-ಡಿ ಪ್ರಮಾಣಪತ್ರಗಳಲ್ಲಿ ಯಾವುದಾದರೂ ಒಂದನ್ನು ಹೊಂದಿರಬೇಕು. ಇದರೊಂದಿಗೆ ಭಾರತದಲ್ಲಿನ ಸಾರ್ವಜನಿಕ ಅಥವಾ ಖಾಸಗಿ ಬ್ಯಾಂಕ್, ಬ್ರೋಕಿಂಗ್ ಸಂಸ್ಥೆ ಅಥವಾ ಆಸ್ತಿ ನಿರ್ವಹಣಾ ಸಂಸ್ಥೆಗಳಲ್ಲಿ ವೆಲ್ತ್ ಉತ್ಪನ್ನಗಳ ಮಾರಾಟ ವಿಭಾಗದಲ್ಲಿ ಕನಿಷ್ಠ 2 ವರ್ಷಗಳ ಕರ್ತವ್ಯ ಅನುಭವ ಹೊಂದಿರಬೇಕು. ನಿರ್ವಹಣಾ ವಿಷಯದಲ್ಲಿ ಸ್ನಾತಕೋತ್ತರ ಪದವಿ ಅಥವಾ ಎಂಬಿಎ ವ್ಯಾಸಂಗ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಕ್ರೆಡಿಟ್ ಅನಲಿಸ್ಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಷಯದಲ್ಲಿ ಪದವಿ ಮುಗಿಸಿರಬೇಕು. ಜೊತೆಗೆ ವಾಣಿಜ್ಯ ಬ್ಯಾಂಕ್‌ನಲ್ಲಿ ಕನಿಷ್ಠ 1 ವರ್ಷದ ಬ್ಯಾಂಕಿಂಗ್ ಕಾರ್ಯಾನುಭವ ಹೊಂದಿರಬೇಕು. ಚಾರ್ಟರ್ಡ್ ಅಕೌಂಟೆಂಟ್ ಅರ್ಹತೆ ಹಾಗೂ ಕಾರ್ಪೊರೇಟ್ ಕ್ರೆಡಿಟ್ ವಿಭಾಗದಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತದೆ.

ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ

ಅಭ್ಯರ್ಥಿಗಳ ವಯೋಮಿತಿಯನ್ನು 01.09.2026 ರ ದಿನಾಂಕಕ್ಕೆ ಅನ್ವಯವಾಗುವಂತೆ ಲೆಕ್ಕಹಾಕಲಾಗುತ್ತದೆ.

  • ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ ಕನಿಷ್ಠ 22 ವರ್ಷ ಹಾಗೂ ಗರಿಷ್ಠ 32 ವರ್ಷ ನಿಗದಿಪಡಿಸಲಾಗಿದೆ.
  • ಕ್ರೆಡಿಟ್ ಅನಲಿಸ್ಟ್ ಹುದ್ದೆಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 33 ವರ್ಷ ನಿಗದಿಪಡಿಸಲಾಗಿದೆ.

ಸರ್ಕಾರದ ನಿಯಮಾವಳಿಗಳ ಅನ್ವಯ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ನಿಯಮಾನುಸಾರ ಸಡಿಲಿಕೆ ಇರುತ್ತದೆ:

  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ: 5 ವರ್ಷಗಳ ಸಡಿಲಿಕೆ
  • ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ: 3 ವರ್ಷಗಳ ಸಡಿಲಿಕೆ
  • ವಿಕಲಚೇತನ ಅಭ್ಯರ್ಥಿಗಳಿಗೆ: ಸಾಮಾನ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 10 ವರ್ಷ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 13 ವರ್ಷ ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 15 ವರ್ಷಗಳ ಸಡಿಲಿಕೆ
  • ಮಾಜಿ ಸೈನಿಕರಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ರಿಯಾಯಿತಿ ದೊರೆಯಲಿದೆ.

ವೇತನಶ್ರೇಣಿ

ಆಯ್ಕೆಯಾದ ಅಧಿಕಾರಿಗಳಿಗೆ ಬ್ಯಾಂಕಿಂಗ್ ಉದ್ಯಮದ ದ್ವಿಪಕ್ಷೀಯ ಒಪ್ಪಂದದ ನಿಯಮಗಳ ಅನ್ವಯ ನಿಯಮಿತ ವೇತನ ಮತ್ತು ಭತ್ಯೆಗಳು ಲಭ್ಯವಿರುತ್ತವೆ.

  • ವೆಲ್ತ್ ಎಕ್ಸಿಕ್ಯೂಟಿವ್: ಮೂಲ ವೇತನ 48480 – 2000/7 – 62480 – 2340/2 – 67160 – 2680/7 – 85920 ಶ್ರೇಣಿಯಲ್ಲಿರುತ್ತದೆ.
  • ಕ್ರೆಡಿಟ್ ಅನಲಿಸ್ಟ್: ಮೂಲ ವೇತನ 64820 – 2340/1 – 67160 – 2680/10 – 93960 ಶ್ರೇಣಿಯಲ್ಲಿರುತ್ತದೆ.

ಮೂಲ ವೇತನದೊಂದಿಗೆ ತುಟ್ಟಿಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ ಹಾಗೂ ಬ್ಯಾಂಕ್ ನಿಯಮಗಳ ಅನ್ವಯ ಇತರ ಭತ್ಯೆಗಳು ದೊರೆಯಲಿವೆ. ಆಯ್ಕೆಯಾದ ಅಭ್ಯರ್ಥಿಗಳು 12 ತಿಂಗಳ (1 ವರ್ಷ) ಪ್ರೊಬೇಷನ್ ಅವಧಿಯನ್ನು ಪೂರೈಸಬೇಕಾಗುತ್ತದೆ. ಅಲ್ಲದೆ ಕನಿಷ್ಠ 3 ವರ್ಷಗಳ ಸೇವಾ ಬಾಂಡ್‌ಗೆ ಒಳಪಡಬೇಕಾಗುತ್ತದೆ.

ಅರ್ಜಿ ಶುಲ್ಕ

  • ಸಾಮಾನ್ಯ, ಆರ್ಥಿಕವಾಗಿ ಹಿಂದುಳಿದ ಮತ್ತು ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ: 850 ರೂಪಾಯಿಗಳು (ಜಿಎಸ್‌ಟಿ ಒಳಗೊಂಡಂತೆ) ಜೊತೆಗೆ ಪಾವತಿ ಗೇಟ್‌ವೇ ಶುಲ್ಕ.
  • ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವಿಕಲಚೇತನರು, ಮಾಜಿ ಸೈನಿಕರು ಹಾಗೂ ಮಹಿಳಾ ಅಭ್ಯರ್ಥಿಗಳಿಗೆ: 175 ರೂಪಾಯಿಗಳು (ಜಿಎಸ್‌ಟಿ ಒಳಗೊಂಡಂತೆ) ಜೊತೆಗೆ ಪಾವತಿ ಗೇಟ್‌ವೇ ಶುಲ್ಕ.

ಶುಲ್ಕವನ್ನು ಆನ್‌ಲೈನ್ ಮೂಲಕ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಬಳಸಿ ಪಾವತಿಸಬೇಕು. ಒಮ್ಮೆ ಪಾವತಿಸಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸಲಾಗುವುದಿಲ್ಲ.

ಅರ್ಜಿ ಸಲ್ಲಿಸುವ ವಿಧಾನ

  1. ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಉದ್ಯೋಗಾವಕಾಶಗಳ ವಿಭಾಗದಲ್ಲಿರುವ ಪ್ರಸ್ತುತ ನೇಮಕಾತಿ ಲಿಂಕ್ ಅನ್ನು ಆಯ್ಕೆಮಾಡಿ.
  2. ಅಗತ್ಯ ಮೂಲ ವಿವರಗಳು, ಚಾಲ್ತಿಯಲ್ಲಿರುವ ಇಮೇಲ್ ವಿಳಾಸ ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ.
  3. ವೈಯಕ್ತಿಕ ಮಾಹಿತಿ, ಶೈಕ್ಷಣಿಕ ಅರ್ಹತೆ, ಮೀಸಲಾತಿ ಹಾಗೂ ಹಿಂದಿನ ಉದ್ಯೋಗ ಅನುಭವದ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
  4. ನಿಗದಿತ ಅಳತೆಯಲ್ಲಿ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ, ಸಹಿ, ಎಡಗೈ ಹೆಬ್ಬೆರಳ ಗುರುತು ಮತ್ತು ಕೈಬರಹದ ಘೋಷಣಾ ಪತ್ರವನ್ನು ಅಪ್‌ಲೋಡ್ ಮಾಡಿ.
  5. ಶೈಕ್ಷಣಿಕ ಅಂಕಪಟ್ಟಿಗಳು, ಪದವಿ ಪ್ರಮಾಣಪತ್ರ ಹಾಗೂ ಅನುಭವದ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಅಪ್‌ಲೋಡ್ ಮಾಡಿ.
  6. ಅರ್ಜಿ ನಮೂನೆಯಲ್ಲಿ ನಮೂದಿಸಿದ ಎಲ್ಲಾ ವಿವರಗಳನ್ನು ಪರಿಶೀಲಿಸಿ ನಂತರ ಆನ್‌ಲೈನ್ ಪಾವತಿ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  7. ಅಂತಿಮವಾಗಿ ಅರ್ಜಿಯನ್ನು ಸಲ್ಲಿಕೆ ಮಾಡಿ, ನಂತರ ಭವಿಷ್ಯದ ಉಲ್ಲೇಖಕ್ಕಾಗಿ ಭರ್ತಿ ಮಾಡಿದ ಅರ್ಜಿ ನಮೂನೆ ಮತ್ತು ಶುಲ್ಕ ಪಾವತಿ ರಸೀದಿಯ ಪ್ರತಿಯನ್ನು ಮುದ್ರಿಸಿ ಇಟ್ಟುಕೊಳ್ಳಿ.

ಆಯ್ಕೆ ವಿಧಾನ

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶೈಕ್ಷಣಿಕ ಅರ್ಹತೆ ಮತ್ತು ಅನುಭವದ ಆಧಾರದ ಮೇಲೆ ಪರಿಶೀಲಿಸಲಾಗುತ್ತದೆ. ಬ್ಯಾಂಕಿನ ತೀರ್ಮಾನದಂತೆ ಆನ್‌ಲೈನ್ ಪರೀಕ್ಷೆ, ವ್ಯಕ್ತಿತ್ವ ಪರೀಕ್ಷೆ, ಗುಂಪು ಚರ್ಚೆ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ಅಂತಿಮ ಆಯ್ಕೆ ನಡೆಸಲಾಗುತ್ತದೆ.

ಒಂದು ವೇಳೆ ಆನ್‌ಲೈನ್ ಪರೀಕ್ಷೆ ನಡೆಸಿದರೆ, ಅದರಲ್ಲಿ ಇಂಗ್ಲಿಷ್ ಭಾಷೆ (20 ಅಂಕಗಳು), ತಾರ್ಕಿಕ ಸಾಮರ್ಥ್ಯ ಮತ್ತು ಗಣಿತ ಸಾಮರ್ಥ್ಯ (20 ಅಂಕಗಳು), ಸಾಮಾನ್ಯ ಮತ್ತು ಬ್ಯಾಂಕಿಂಗ್ ಜಾಗೃತಿ (20 ಅಂಕಗಳು) ಹಾಗೂ ಹುದ್ದೆಗೆ ಸಂಬಂಧಿಸಿದ ವಿಷಯ ಜ್ಞಾನ (60 ಅಂಕಗಳು) ಒಳಗೊಂಡಂತೆ ಒಟ್ಟು 120 ಅಂಕಗಳಿಗೆ 120 ನಿಮಿಷಗಳ ಪರೀಕ್ಷೆ ಇರುತ್ತದೆ. ತಪ್ಪು ಉತ್ತರಗಳಿಗೆ 0.25 ಅಂಕಗಳ ಕಡಿತ ಇರುತ್ತದೆ. ಸಂದರ್ಶನದಲ್ಲಿ ಸಾಮಾನ್ಯ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳು ಕನಿಷ್ಠ 60% ಮತ್ತು ಮೀಸಲಾತಿ ವರ್ಗದ ಅಭ್ಯರ್ಥಿಗಳು 55% ಅಂಕಗಳನ್ನು ಗಳಿಸಿ ಉತ್ತೀರ್ಣರಾಗಬೇಕಾಗುತ್ತದೆ.

ಪ್ರಶ್ನೋತ್ತರಗಳು (FAQs)

ಬ್ಯಾಂಕ್ ಆಫ್ ಬರೋಡಾ ನೇಮಕಾತಿಯಲ್ಲಿ ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ?
ಈ ನೇಮಕಾತಿ ಅಧಿಸೂಚನೆಯಲ್ಲಿ ವೆಲ್ತ್ ಎಕ್ಸಿಕ್ಯೂಟಿವ್ ಮತ್ತು ಕ್ರೆಡಿಟ್ ಅನಲಿಸ್ಟ್ ಸೇರಿದಂತೆ ಒಟ್ಟು 1100 ಖಾಲಿ ಹುದ್ದೆಗಳಿವೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು 24.09.2026 ಕೊನೆಯ ದಿನಾಂಕವಾಗಿದೆ.

ವೆಲ್ತ್ ಎಕ್ಸಿಕ್ಯೂಟಿವ್ ಹುದ್ದೆಗೆ ಅನುಭವ ಕಡ್ಡಾಯವೇ?
ಹೌದು, ಈ ಹುದ್ದೆಗೆ ವೆಲ್ತ್ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಕರ್ತವ್ಯ ಅನುಭವ ಕಡ್ಡಾಯವಾಗಿರಬೇಕು.

ಕರ್ನಾಟಕದಲ್ಲಿ ಪರೀಕ್ಷಾ ಕೇಂದ್ರಗಳು ಇವೆಯೇ?
ಹೌದು, ಆನ್‌ಲೈನ್ ಪರೀಕ್ಷೆ ನಡೆದರೆ ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಮೈಸೂರು, ಕಲಬುರಗಿ, ಉಡುಪಿ, ಶಿವಮೊಗ್ಗ, ಮಂಗಳೂರು ಮತ್ತು ಬೆಳಗಾವಿ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ.

ಈ ಹುದ್ದೆಗಳಿಗೆ ಸೇವಾ ಬಾಂಡ್ ಇರುತ್ತದೆಯೇ?
ಹೌದು, ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕ್‌ನಲ್ಲಿ ಕನಿಷ್ಠ 3 ವರ್ಷಗಳ ಕಾಲ ಸೇವೆ ಸಲ್ಲಿಸಬೇಕೆಂಬ ಸೇವಾ ಬಾಂಡ್‌ಗೆ ಒಳಪಡಬೇಕಾಗುತ್ತದೆ.

ಪ್ರಮುಖ ದಿನಾಂಕಗಳು

ವಿವರಗಳುದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ ದಿನಾಂಕ04.09.2026
ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಸಲು ಕೊನೆಯ ದಿನಾಂಕ24.09.2026 16.10.2026
ಆನ್‌ಲೈನ್ ಪರೀಕ್ಷೆ / ಸಂದರ್ಶನದ ದಿನಾಂಕಶೀಘ್ರದಲ್ಲೇ ಪ್ರಕಟಿಸಲಾಗುವುದು

ಪ್ರಮುಖ ಲಿಂಕುಗಳು

ವಿವರಗಳುಲಿಂಕ್
ಅಧಿಕೃತ ವೆಬ್ಸೈಟ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆಇಲ್ಲಿ ಕ್ಲಿಕ್ ಮಾಡಿ
ಅರ್ಜಿ ಸಲ್ಲಿಸುವ ಲಿಂಕ್ಇಲ್ಲಿ ಕ್ಲಿಕ್ ಮಾಡಿ
ಟೆಲಿಗ್ರಾಮ್ ಗ್ರೂಪ್ ಲಿಂಕ್ಇಲ್ಲಿ ಕ್ಲಿಕ್ ಮಾಡಿ
Telegram Channel Join Now
Scroll to Top