ಮೈಸೂರು ಮಹಾನಗರ ಪಾಲಿಕೆ ನೇಮಕಾತಿ 2026: ಕರ್ನಾಟಕ ಸರ್ಕಾರದ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಮೈಸೂರು ಮಹಾನಗರ ಪಾಲಿಕೆಯು ತನ್ನ ಆಡಳಿತ ವ್ಯಾಪ್ತಿಯಲ್ಲಿ ಖಾಲಿ ಇರುವ ಒಳಚರಂಡಿ ಸಹಾಯಕರು ಅಂದರೆ ಯುಜಿಡಿ ಹೆಲ್ಫರ್ಸ್ ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದೆ. ಮೈಸೂರು ಮಹಾನಗರ ಪಾಲಿಕೆಯಲ್ಲಿ ಈಗಾಗಲೇ ದಿನಗೂಲಿ, ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ನೌಕರರಿಗೆ ಇದೊಂದು ಅತ್ಯುತ್ತಮ ಉದ್ಯೋಗಾವಕಾಶವಾಗಿದ್ದು, ಆಕರ್ಷಕ ವೇತನ ಶ್ರೇಣಿ ಹಾಗೂ ಸರ್ಕಾರಿ ಸೇವಾ ಸೌಲಭ್ಯಗಳೊಂದಿಗೆ ಕಾಯಂ ಹುದ್ದೆ ಪಡೆಯಲು ಸುವರ್ಣಾವಕಾಶ ಕಲ್ಪಿಸಲಾಗಿದೆ.
ಉದ್ಯೋಗ ವಿವರ
- ನೇಮಕಾತಿ ಸಂಸ್ಥೆ: ಮೈಸೂರು ಮಹಾನಗರ ಪಾಲಿಕೆ
- ಹುದ್ದೆಗಳ ಹೆಸರು: ಯುಜಿಡಿ ಹೆಲ್ಫರ್ಸ್ (ಒಳಚರಂಡಿ ಸಹಾಯಕರು)
- ಹುದ್ದೆಗಳ ಸಂಖ್ಯೆ: 116
- ಉದ್ಯೋಗ ಸ್ಥಳ: ಮೈಸೂರು (ಕರ್ನಾಟಕ)
- ಅರ್ಜಿ ಸಲ್ಲಿಸುವ ಬಗೆ: ಆಫ್‌ಲೈನ್ (ಖುದ್ದಾಗಿ ಸಲ್ಲಿಕೆ)
ಹುದ್ದೆಗಳ ವಿವರ
ಮೈಸೂರು ಮಹಾನಗರ ಪಾಲಿಕೆಯಲ್ಲಿ ಲಭ್ಯವಿರುವ ಒಟ್ಟು ಹುದ್ದೆಗಳ ವರ್ಗೀಕರಣ ಮತ್ತು ವಿವರ ಈ ಕೆಳಗಿನಂತಿದೆ:
- ಯುಜಿಡಿ ಹೆಲ್ಫರ್ಸ್: 116 ಹುದ್ದೆಗಳು
ವಿವಿಧ ಪ್ರವರ್ಗಗಳಿಗೆ ಹಂಚಿಕೆಯಾಗಿರುವ ಮೀಸಲಾತಿ ವಿವರ:
- ಪರಿಶಿಷ್ಟ ಜಾತಿ (ಪ್ರವರ್ಗ-ಎ): 7 ಹುದ್ದೆಗಳು
- ಪರಿಶಿಷ್ಟ ಜಾತಿ (ಪ್ರವರ್ಗ-ಬಿ): 6 ಹುದ್ದೆಗಳು
- ಪರಿಶಿಷ್ಟ ಜಾತಿ (ಪ್ರವರ್ಗ-ಸಿ): 5 ಹುದ್ದೆಗಳು
- ಪರಿಶಿಷ್ಟ ಪಂಗಡ: 4 ಹುದ್ದೆಗಳು
- ಪ್ರವರ್ಗ-1: 5 ಹುದ್ದೆಗಳು
- ಪ್ರವರ್ಗ-2ಎ: 17 ಹುದ್ದೆಗಳು
- ಪ್ರವರ್ಗ-2ಬಿ: 6 ಹುದ್ದೆಗಳು
- ಪ್ರವರ್ಗ-3ಎ: 4 ಹುದ್ದೆಗಳು
- ಪ್ರವರ್ಗ-3ಬಿ: 4 ಹುದ್ದೆಗಳು
- ಸಾಮಾನ್ಯ ವರ್ಗ: 58 ಹುದ್ದೆಗಳು
ವಿದ್ಯಾರ್ಹತೆ
ಮೈಸೂರು ಮಹಾನಗರ ಪಾಲಿಕೆಯ ಯುಜಿಡಿ ಹೆಲ್ಫರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕನಿಷ್ಠ ಅರ್ಹತೆಗಳು:
- ಅಭ್ಯರ್ಥಿಗಳು ಕನ್ನಡ ಮಾತನಾಡಲು ಬಲ್ಲವರಾಗಿರಬೇಕು.
- ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರಸ್ತುತ ನೇರಪಾವತಿ, ಕ್ಷೇಮಾಭಿವೃದ್ಧಿ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ, ಗುತ್ತಿಗೆ ಅಥವಾ ಹೊರಗುತ್ತಿಗೆಯಡಿಯಲ್ಲಿ (ಎಸ್.ಟಿ.ಪಿ ಅಥವಾ ವೆಟ್‌ವೆಲ್ ಕಾರ್ಯನಿರ್ವಹಿಸುತ್ತಿರುವವರನ್ನು ಹೊರತುಪಡಿಸಿ) ಕನಿಷ್ಠ 2 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.
- ಅರ್ಜಿದಾರರು ದೈಹಿಕ ಸಾಮರ್ಥ್ಯ ಹೊಂದಿದ್ದು ಆರೋಗ್ಯವಂತರಾಗಿರಬೇಕು ಹಾಗೂ ಈ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ವೈದ್ಯಕೀಯ ದೃಢೀಕರಣ ಪತ್ರ ಹೊಂದಿರಬೇಕು.
ವಯೋಮಿತಿ & ವಯೋಮಿತಿಯಲ್ಲಿ ಸಡಿಲಿಕೆ
- ಕನಿಷ್ಠ ವಯೋಮಿತಿ: ಸರ್ಕಾರ ಅಧಿಸೂಚನೆ ಹೊರಡಿಸಿದ ದಿನಾಂಕಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರಬೇಕು.
- ಗರಿಷ್ಠ ವಯೋಮಿತಿ: ಗರಿಷ್ಠ ವಯಸ್ಸು 55 ವರ್ಷ ಮೀರಿರಬಾರದು.
- ವಯೋಮಿತಿ ಸಡಿಲಿಕೆ: ಈ ನೇಮಕಾತಿಯು ವಿಶೇಷ ನಿಯಮಗಳಡಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ನಡೆಯುತ್ತಿರುವುದರಿಂದ ಅಧಿಸೂಚನೆಯಲ್ಲಿ ಸೂಚಿಸಿರುವಂತೆ 55 ವರ್ಷಗಳ ಗರಿಷ್ಠ ವಯೋಮಿತಿಯೊಳಗೆ ಬರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ವೇತನಶ್ರೇಣಿ
ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರದ ನಿಯಮಾನುಸಾರ ಮಾಸಿಕ ವೇತನ ಶ್ರೇಣಿಯನ್ನು ನೀಡಲಾಗುತ್ತದೆ.
- ಮಾಸಿಕ ವೇತನ ಶ್ರೇಣಿ: 27000 ರಿಂದ 46675 ರೂಪಾಯಿಗಳು.
ಅರ್ಜಿ ಶುಲ್ಕ
ಈ ವಿಶೇಷ ನೇಮಕಾತಿ ಪ್ರಕ್ರಿಯೆಗೆ ಯಾವುದೇ ರೀತಿಯ ಪ್ರತ್ಯೇಕ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿಲ್ಲ. ನಿಗದಿತ ಅರ್ಜಿ ನಮೂನೆಯನ್ನು ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯಿಂದ ಉಚಿತವಾಗಿ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವ ವಿಧಾನ
ಅರ್ಹ ಅಭ್ಯರ್ಥಿಗಳು ನಿಗದಿತ ಅವಧಿಯೊಳಗೆ ಆಫ್‌ಲೈನ್ ಮೂಲಕವೇ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ಹಂತ-ಹಂತದ ವಿಧಾನ ಇಲ್ಲಿದೆ:
- ಅಭ್ಯರ್ಥಿಗಳು ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿ, ಸಯ್ಯಾಜಿರಾವ್ ರಸ್ತೆ, ಮೈಸೂರು ಇಲ್ಲಿಗೆ ಭೇಟಿ ನೀಡಿ ನಿಗದಿತ ಅರ್ಜಿ ನಮೂನೆಯನ್ನು ಪಡೆದುಕೊಳ್ಳಬೇಕು.
- ಅರ್ಜಿಯಲ್ಲಿ ಕೇಳಲಾಗಿರುವ ಎಲ್ಲಾ ವೈಯಕ್ತಿಕ ಮತ್ತು ಸೇವಾ ವಿವರಗಳನ್ನು ನಿಖರವಾಗಿ ಭರ್ತಿ ಮಾಡಿ.
- ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರವನ್ನು ಅರ್ಜಿಯ ಮೇಲೆ ಅಂಟಿಸಿ, ಅದರ ಮೇಲೆ ಸಹಿ ಅಥವಾ ಎಡಗೈ ಹೆಬ್ಬೆಟ್ಟಿನ ಗುರುತು ಮಾಡಬೇಕು.
- ಅಗತ್ಯವಿರುವ ಶೈಕ್ಷಣಿಕ ದಾಖಲಾತಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಸೇವಾ ದೃಢೀಕರಣ ಪತ್ರ, ಇ.ಎಸ್.ಐ ಮತ್ತು ಪಿ.ಎಫ್ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ.
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಗ್ರಾಮೀಣ, ಕನ್ನಡ ಮಾಧ್ಯಮ ಅಥವಾ ಅನ್ವಯವಾಗುವ ಇತರೆ ಮೀಸಲಾತಿ ಪ್ರಮಾಣ ಪತ್ರಗಳ ದೃಢೀಕೃತ ಪ್ರತಿಗಳನ್ನು ಜೊತೆಗಿರಿಸಿ.
- ಸಂಪೂರ್ಣವಾಗಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ “ಅಧ್ಯಕ್ಷರು, ಆಯ್ಕೆ ಮತ್ತು ನೇರ ನೇಮಕಾತಿ ಪ್ರಾಧಿಕಾರ ಹಾಗೂ ಆಯುಕ್ತರು, ಮೈಸೂರು ಮಹಾನಗರ ಪಾಲಿಕೆ, ಮೈಸೂರು” ಇವರಿಗೆ ದಿನಾಂಕ 09-10-2026 ರ ಸಂಜೆ 5:30 ಗಂಟೆಯೊಳಗೆ ನೇರವಾಗಿ ಕಚೇರಿಗೆ ಸಲ್ಲಿಸಿ ಅಧಿಕೃತ ಸ್ವೀಕೃತಿ ಪಡೆಯಬೇಕು.
- ಅಂಚೆ ಮೂಲಕ ಅಥವಾ ಇಮೇಲ್ ಮೂಲಕ ಕಳುಹಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಆಯ್ಕೆ ವಿಧಾನ
- ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ (ರಾಜ್ಯದ ಮಹಾನಗರ ಪಾಲಿಕೆಗಳ ಯುಜಿಡಿ ಹೆಲ್ಫರ್ಸ್ ನೇಮಕಾತಿ) (ವಿಶೇಷ) ನಿಯಮಗಳು 2026 ರ ಅನ್ವಯ ನೇಮಕಾತಿ ನಡೆಯಲಿದೆ.
- ಮೈಸೂರು ಮಹಾನಗರ ಪಾಲಿಕೆಯಲ್ಲಿ ಹಾಲಿ ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಸಲ್ಲಿಸಿರುವ ಸೇವಾ ಅವಧಿಯನ್ನು ಹಾಗೂ ಇ.ಎಸ್.ಐ ಮತ್ತು ಪಿ.ಎಫ್ ದಾಖಲೆಗಳನ್ನು ಪರಿಶೀಲಿಸಿ ಜ್ಯೇಷ್ಠತೆಯನ್ನು ನಿರ್ಧರಿಸಲಾಗುತ್ತದೆ.
- ಹೆಚ್ಚಿನ ಸೇವಾ ಅವಧಿ ಪೂರೈಸಿರುವ ಅಭ್ಯರ್ಥಿಗಳಿಗೆ ಆಯ್ಕೆಯಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ.
- ಇಬ್ಬರು ಅಥವಾ ಅದಕ್ಕಿಂತ ಹೆಚ್ಚು ಅಭ್ಯರ್ಥಿಗಳ ಸೇವಾ ಅವಧಿ ಸಮನಾಗಿದ್ದಲ್ಲಿ, ಹೆಚ್ಚಿನ ವಯಸ್ಸಿನ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಹುಟ್ಟಿದ ದಿನಾಂಕವೂ ಒಂದೇ ಆಗಿದ್ದಲ್ಲಿ ಲಾಟರಿ ಮೂಲಕ ಅಂತಿಮ ಆಯ್ಕೆ ನಡೆಸಲಾಗುತ್ತದೆ.
- ಮೂಲ ದಾಖಲಾತಿಗಳ ಪರಿಶೀಲನೆ, ವೈದ್ಯಕೀಯ ತಪಾಸಣೆ ಮತ್ತು ಜಾತಿ ಸಿಂಧುತ್ವ ಪ್ರಮಾಣ ಪತ್ರ ದೃಢೀಕರಣದ ಬಳಿಕ ನೇಮಕಾತಿ ಆದೇಶ ನೀಡಲಾಗುತ್ತದೆ.
ಪ್ರಶ್ನೋತ್ತರಗಳು (FAQs)
ಮೈಸೂರು ಮಹಾನಗರ ಪಾಲಿಕೆ ನೇಮಕಾತಿಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ?
ಒಟ್ಟು 116 ಯುಜಿಡಿ ಹೆಲ್ಫರ್ಸ್ (ಒಳಚರಂಡಿ ಸಹಾಯಕರು) ಹುದ್ದೆಗಳಿಗೆ ಈ ಅಧಿಸೂಚನೆ ಹೊರಡಿಸಲಾಗಿದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಅರ್ಜಿಗಳನ್ನು ಸಲ್ಲಿಸಲು 09-10-2026 ಕೊನೆಯ ದಿನಾಂಕವಾಗಿದೆ.
ಅರ್ಜಿಯನ್ನು ಅಂಚೆ ಮೂಲಕ ಕಳುಹಿಸಬಹುದೇ?
ಇಲ್ಲ, ಅಂಚೆ ಮೂಲಕ ಕಳುಹಿಸಲು ಅವಕಾಶವಿಲ್ಲ. ಮೈಸೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಗೆ ಖುದ್ದಾಗಿ ತೆರಳಿ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು.
ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ ಎಷ್ಟು?
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 55 ವರ್ಷದ ಒಳಗಿರಬೇಕು.
ಹೊಸ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಪ್ರಸ್ತುತ ಮೈಸೂರು ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಅಥವಾ ದಿನಗೂಲಿ ಆಧಾರದಲ್ಲಿ ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರುವ ನೌಕರರಿಗೆ ಮಾತ್ರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ರಮುಖ ದಿನಾಂಕಗಳು
| ವಿವರ | ದಿನಾಂಕ |
| ಅಧಿಸೂಚನೆ ಪ್ರಕಟವಾದ ದಿನಾಂಕ | 08-09-2026 |
| ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ | 10-09-2026 |
| ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ | 09-10-2026 (ಸಂಜೆ 5:30 ರವರೆಗೆ) |
- SSC JE ನೇಮಕಾತಿ 2026: 1748 ಕಿರಿಯ ಇಂಜಿನಿಯರ್ ಹುದ್ದೆಗಳ ಬೃಹತ್ ಅಧಿಸೂಚನೆ ಪ್ರಕಟ – 22.09.2026
- ಶಿವಮೊಗ್ಗ ಜಿಲ್ಲಾ ಪಂಚಾಯತ್ ನೇರ ನೇಮಕಾತಿ 2026 – 25-09-2026
- KPSC ನೇಮಕಾತಿ 2026: 83 ಗ್ರೂಪ್ ಎ & ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ – 26-09-2026
- ಸರಕಾರಿ ನೌಕರರ ಸಹಕಾರಿ ಬ್ಯಾಂಕ್ ನಿಯಮಿತ ನೇಮಕಾತಿ 2026 – 28/09/2026
- ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಡೇಟಾ ಎಂಟ್ರಿ ಆಪರೇಟರ್ ಹುದ್ದೆಗಳು – 28-09-2026
- ಜಿಲ್ಲಾ ನ್ಯಾಯಾಲಯ ನೇರ ನೇಮಕಾತಿ 2026 – 30.09.2026
- ಡಿಸಿ ಕಚೇರಿಯಿಂದ ನೇರ ನೇಮಕಾತಿ 2026 – 30-09-2026
- KEA ಪೌರಾಡಳಿತ ನಿರ್ದೇಶನಾಲಯ ನೇಮಕಾತಿ 2026: 210 ಗ್ರೂಪ್-ಸಿ ಹುದ್ದೆಗಳು – 30.09.2026
- 1871 ದೆಹಲಿ ಪೊಲೀಸ್ ಮತ್ತು ಸಿಎಪಿಎಫ್ ಸಬ್-ಇನ್ಸ್ಪೆಕ್ಟರ್ ಹುದ್ದೆಗಳ ಬೃಹತ್ ನೇಮಕಾತಿ – 30.09.2026
- ಕರ್ನಾಟಕ ಅರಣ್ಯ ಇಲಾಖೆ ನೇಮಕಾತಿ 2026: 750 ಅರಣ್ಯ ವೀಕ್ಷಕ ಹುದ್ದೆಗಳಿಗೆ ಅರ್ಜಿ ಅಹ್ವಾನ! – 03-10-2026
- ಕೊಡಗು ಜಿಲ್ಲಾ ನ್ಯಾಯಾಲಯ ನೇಮಕಾತಿ 2026: ಜವಾನ, ಚಾಲಕ ಹುದ್ದೆಗಳಿಗೆ ಅರ್ಜಿ – 03-10-2026
- SSC ಇಂದ 2536 ಹುದ್ದೆಗಳ ಭರ್ಜರಿ ನೇಮಕಾತಿ 2026 – 07-10-2026
- ಕರ್ನಾಟಕ ಕಾರಾಗೃಹ ಇಲಾಖೆ ನೇಮಕಾತಿ 2026: ಜೈಲರ್, ವಾರ್ಡರ್ ಸೇರಿ 869 ಹುದ್ದೆಗಳಿಗೆ ಅರ್ಜಿ ಆಹ್ವಾನ – 15.10.2026
ಪ್ರಮುಖ ಲಿಂಕುಗಳು
| ವಿವರ | ಲಿಂಕ್ |
| ಅಧಿಕೃತ ವೆಬ್ಸೈಟ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಅಧಿಕೃತ ಅಧಿಸೂಚನೆ | ಇಲ್ಲಿ ಕ್ಲಿಕ್ ಮಾಡಿ |
| ಅರ್ಜಿ ಸಲ್ಲಿಸುವ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |
| ಟೆಲಿಗ್ರಾಮ್ ಗ್ರೂಪ್ ಲಿಂಕ್ | ಇಲ್ಲಿ ಕ್ಲಿಕ್ ಮಾಡಿ |









