Last updated on September 28th, 2025 at 04:39 pm

ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದಲ್ಲಿ ನೇಮಕಾತಿ ಅರ್ಜಿ ಸಲ್ಲಿಸಲು ನಾಳೆ ದಿನಾಂಕ 29-09-2025 ಕೊನೆಯ ದಿನವಾಗಿದೆ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟದಲ್ಲಿ ನೇಮಕಾತಿ ತಿದ್ದುಪಡಿ ಪ್ರಕಟಣೆ
ಉದ್ಯೋಗ ವಿವರ
KMF SHIMUL Recruitment 2025: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ. (ಶಿಮುಲ್) ವಿವಿಧ ವೃಂದಗಳಲ್ಲಿ ಖಾಲಿ ಇರುವ ಒಟ್ಟು 194 ಹುದ್ದೆಗಳ ನೇರ ನೇಮಕಾತಿಗಾಗಿ ಈ ಹಿಂದೆ ದಿನಾಂಕ 31.01.2023 ರಂದು ಪ್ರಕಟಣೆ ಹೊರಡಿಸಿ ಆನ್ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿತ್ತು. ಈಗ ಹೊಸ ನೇಮಕಾತಿ ತಿದ್ದುಪಡಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಶಿವಮೊಗ್ಗ ಹಾಲು ಒಕ್ಕೂಟ ಹುದ್ದೆಗಳು 2025
ಈ ತಿದ್ದುಪಡಿಯ ಪ್ರಕಾರ ಒಕ್ಕೂಟದ ಹಿಂದಿನ ಪ್ರಕಟಣೆಯಲ್ಲಿದ್ದ ಒಟ್ಟು 27 ಹುದ್ದೆಗಳಿಗೆ ಈ ಹಿಂದೆ ನೀಡಲಾಗಿದ್ದ ಸೇವಾನುಭವ ಅವಕಾಶವನ್ನು ರದ್ದುಪಡಿಸಿ ಸಾಮಾನ್ಯ ನೇರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಈಗಾಗಲೇ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವವರು ಮತ್ತೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ.
ಈ ನೇಮಕಾತಿ ಪ್ರಕ್ರಿಯೆಯು ಕರ್ನಾಟಕ ಸಹಕಾರ ಸಂಘಗಳ ನಿಯಮ 1960 ರ ನಿಯಮ 17 ಮತ್ತು 18 ಕ್ಕೆ ಅನುಗುಣವಾಗಿ ಕೈಗೊಳ್ಳಲಾಗಿದೆ. ಅಭ್ಯರ್ಥಿಗಳು ಅರ್ಹತೆಯನ್ನು ಅವಲಂಬಿಸಿ ಸಾಮಾನ್ಯ ನೇರ ನೇಮಕಾತಿಯಡಿ ಪರಿಗಣಿಸಲಾಗುವುದು.
ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ರೂ.15000 ಸ್ಕಾಲರ್ಶಿಪ್
ನೇಮಕಾತಿ ಸಂಸ್ಥೆ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಶಿವಮೊಗ್ಗ. KMF SHIMUL Notification 2025
ಹುದ್ದೆಗಳ ಹೆಸರು ಮತ್ತು ಹುದ್ದೆಗಳ ಸಂಖ್ಯೆ
ಒಟ್ಟು 27 ಹುದ್ದೆಗಳ ತಿದ್ದುಪಡಿ ನೇಮಕಾತಿ ಪ್ರಕಟಣೆ ಹೊರಡಿಸಲಾಗಿದೆ.
- ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್) – 03 ಹುದ್ದೆಗಳು
- ವಿಸ್ತರಣಾಧಿಕಾರಿ ದರ್ಜೆ-3 – 05 ಹುದ್ದೆಗಳು
- ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ) – 04 ಹುದ್ದೆಗಳು
- ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ) – 02 ಹುದ್ದೆಗಳು
- ಕಿರಿಯ ಸಿಸ್ಟಂ ಆಪರೇಟರ್ – 03 ಹುದ್ದೆಗಳು
- ಕಿರಿಯ ತಾಂತ್ರಿಕರು (ಎಲೆಕ್ಟಿಕಲ್) – 05 ಹುದ್ದೆಗಳು
- ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಂ.ಆರ್.ಎ.ಸಿ) – 02 ಹುದ್ದೆಗಳು
- ಕಿರಿಯ ತಾಂತ್ರಿಕರು (ಬಾಯರ್ ಅಟೆಂಡೆಂಟ್) – 03 ಹುದ್ದೆಗಳು
ಉದ್ಯೋಗ ಸ್ಥಳ
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಕ್ಕೂಟದ ಕೇಂದ್ರ ಕಚೇರಿ ಅಥವಾ ಯಾವುದೇ ಘಟಕ. ಒಕ್ಕೂಟದ ವ್ಯಾಪ್ತಿಯ ಹೊರಗಿನ ಸ್ಥಳಗಳಿಗೂ ಸಹ ನಿಯೋಜಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಬಗೆ
ಅರ್ಜಿ ಆನ್ಲೈನ್ ಮೂಲಕ ಮಾತ್ರ ಸಲ್ಲಿಸಬೇಕು. ವೈಯಕ್ತಿಕವಾಗಿ ಅಥವಾ ಅಂಚೆ/ಕೊರಿಯರ್ ಮೂಲಕ ಸಲ್ಲಿಸಲು ಅವಕಾಶವಿಲ್ಲ.
ವಿದ್ಯಾರ್ಹತೆ
- ಸಹಾಯಕ ವ್ಯವಸ್ಥಾಪಕರು (ಎಫ್ ಅಂಡ್ ಎಫ್): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕೃಷಿ ವಿಜ್ಞಾನ ವಿಷಯದಲ್ಲಿ ಬಿ.ಎಸ್ಸಿ (ಕೃಷಿ) ಪದವಿ ಹೊಂದಿರಬೇಕು.
- ವಿಸ್ತರಣಾಧಿಕಾರಿ ದರ್ಜೆ-3: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು.
- ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿಯಲ್ಲಿ ಕೆಮಿಸ್ಟ್ರಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು.
- ಕೆಮಿಸ್ಟ್ ದರ್ಜೆ-2 (ಮೈಕ್ರೋಬಯಾಲಜಿ): ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ ಪದವಿಯಲ್ಲಿ ಮೈಕ್ರೋಬಯಾಲಜಿ ಒಂದು ವಿಷಯವನ್ನಾಗಿ ವ್ಯಾಸಂಗ ಮಾಡಿರುವುದರ ಜೊತೆಗೆ ಕಂಪ್ಯೂಟರ್ ನಿರ್ವಹಣೆಯ ಜ್ಞಾನ ಹೊಂದಿರಬೇಕು.
- ಕಿರಿಯ ಸಿಸ್ಟಂ ಆಪರೇಟರ್: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿಯೊಂದಿಗೆ ಕನಿಷ್ಠ ಒಂದು ವರ್ಷದ ಡಿಪ್ಲೋಮಾ ಇನ್ ಕಂಪ್ಯೂಟರ್ ಅಪ್ಲಿಕೇಷನ್ ಕೋರ್ಸ್ ಹಾಗೂ 3 ವರ್ಷಗಳ ಸೇವಾನುಭವ ಹೊಂದಿರಬೇಕು.
- ಕಿರಿಯ ತಾಂತ್ರಿಕರು (ಎಲೆಕ್ಟಿಕಲ್): ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ಎಲೆಕ್ಟಿಕಲ್ ಟ್ರೇಡ್ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು.
- ಕಿರಿಯ ತಾಂತ್ರಿಕರು ರೆಫ್ರಿಜರೇಷನ್ (ಎಂ.ಆರ್.ಎ.ಸಿ): ಎಸ್.ಎಸ್.ಎಲ್.ಸಿ ಯೊಂದಿಗೆ ಡೈರೆಕ್ಟೋರೇಟ್ ಜನರಲ್ ಆಫ್ ಎಂಪ್ಲಾಯ್ಮೆಂಟ್ ಅಂಡ್ ಟ್ರೈನಿಂಗ್ ಇವರಿಂದ ರೆಫ್ರಿಜರೇಷನ್ ಟ್ರೇಡ್ನಲ್ಲಿ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ (ಎನ್.ಟಿ.ಸಿ) ಅಥವಾ ಪ್ರಾವಿಜನಲ್ ನ್ಯಾಷನಲ್ ಟ್ರೇಡ್ ಸರ್ಟಿಫಿಕೇಟ್ ಅಥವಾ ನ್ಯಾಷನಲ್ ಕೌನ್ಸಿಲ್ ಫಾರ್ ವೆಕೇಷನಲ್ ಟ್ರೈನಿಂಗ್ (ಎನ್.ಸಿ.ವಿ.ಟಿ) ಸರ್ಟಿಫಿಕೇಟ್ ಪಡೆದಿರಬೇಕು.
- ಕಿರಿಯ ತಾಂತ್ರಿಕರು (ಬಾಯರ್ ಅಟೆಂಡೆಂಟ್): ಎಸ್.ಎಸ್.ಎಲ್.ಸಿ ಯೊಂದಿಗೆ ನಿರ್ದೇಶಕರು, ಬಾಟ್ಲರ್ ಮತ್ತು ಕಾರ್ಖಾನೆ ಇವರಿಂದ ಬಾಯರ್ ಅಟೆಂಡೆಂಟ್ ದರ್ಜೆ-2 ಅಥವಾ ದರ್ಜೆ-1 ರ ಪ್ರಮಾಣಪತ್ರ ಅಥವಾ ಎಸ್.ಎಸ್.ಎಲ್.ಸಿ ಯೊಂದಿಗೆ ಬಾಯರ್ ಅಟೆಂಡೆಂಟ್ ಟ್ರೇಡ್ನಲ್ಲಿ ಪ್ರಾವಿಜನಲ್/ನ್ಯಾಷನಲ್ ಶಿಶಿಕ್ಷು ಪ್ರಮಾಣ ಪತ್ರ ಹೊಂದಿರಬೇಕು.

ವಯೋಮಿತಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾದ 29.09.2025 ಕ್ಕೆ ಅನ್ವಯಿಸುವಂತೆ ಕನಿಷ್ಠ ಮತ್ತು ಗರಿಷ್ಠ ವಯೋಮಿತಿ ಈ ಕೆಳಗಿನಂತಿದೆ: ಶಿಮುಲ್ ನೇಮಕಾತಿ 2025
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1: ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ.
- ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ: ಕನಿಷ್ಠ 18 ವರ್ಷ, ಗರಿಷ್ಠ 38 ವರ್ಷ.
- ಸಾಮಾನ್ಯ ವರ್ಗ: ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ.
ಇದಲ್ಲದೆ, ಮಾಜಿ ಸೈನಿಕರು, ಎನ್.ಸಿ.ಸಿ ಕೆಡೆಟ್ ಇನ್ನೂಕ್ಟರ್ಗಳು, ವಿಧವೆಯರು ಮತ್ತು ಅಂಗವಿಕಲರಿಗೆ ವಯೋಮಿತಿ ಸಡಿಲಿಕೆ ಇರುತ್ತದೆ.
ವೇತನಶ್ರೇಣಿ
- ಸಹಾಯಕ ವ್ಯವಸ್ಥಾಪಕರು (ಎಫ್ಅಂಡ್ಎಫ್): ರೂ. 83,700 – 1,55,200.
- ವಿಸ್ತರಣಾಧಿಕಾರಿ ದರ್ಜೆ-3: ರೂ. 54,175 – 99,400.
- ಕೆಮಿಸ್ಟ್ ದರ್ಜೆ-2 (ಕೆಮಿಸ್ಟ್ರಿ ಮತ್ತು ಮೈಕ್ರೋಬಯಾಲಜಿ): ರೂ. 44,425 – 83,700.
- ಕಿರಿಯ ಸಿಸ್ಟಂ ಆಪರೇಟರ್: ರೂ. 44,425 – 83,700.
- ಕಿರಿಯ ತಾಂತ್ರಿಕರು (ಎಲ್ಲಾ ಹುದ್ದೆಗಳು): ರೂ. 34,100 – 67,600.
ಅರ್ಜಿ ಶುಲ್ಕ
- ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು: ರೂ. 500/- (ಬ್ಯಾಂಕ್ ಶುಲ್ಕ ಪ್ರತ್ಯೇಕ).
- ಇತರೆ ವರ್ಗದ ಅಭ್ಯರ್ಥಿಗಳು: ರೂ. 1000/- (ಬ್ಯಾಂಕ್ ಶುಲ್ಕ ಪ್ರತ್ಯೇಕ).
ಶುಲ್ಕವನ್ನು ಆನ್ಲೈನ್ ಮೂಲಕ (ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್) ಪಾವತಿಸಬೇಕು. Shimul Vacancy Notification 2025
ಆಯ್ಕೆ ವಿಧಾನ
ಅರ್ಹ ಅಭ್ಯರ್ಥಿಗಳಿಗೆ ಮೌಖಿಕ ಸಂದರ್ಶನ ಇರುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 29.08.2025.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29.09.2025.
- ಶುಲ್ಕ ಪಾವತಿಸಲು ಕೊನೆಯ ದಿನಾಂಕ: 29.09.2025.
ಪ್ರಮುಖ ಲಿಂಕುಗಳು
- ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ: www.shimul.coop
- ಅಧಿಸೂಚನೆ (ನೋಟಿಫಿಕೇಶನ್ : ಇಲ್ಲಿ ಕ್ಲಿಕ್ ಮಾಡಿ
- ಸಹಾಯವಾಣಿ (Help Line): 9535165947