Last updated on August 4th, 2025 at 09:50 am
ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ಕಾನ್‌ಟ್ರಾಕ್ಟ್ ಹುದ್ದೆಗಳ ನೇಮಕಾತಿ 2025 | ಸಂಪೂರ್ಣ ಮಾಹಿತಿ
NHB Recruitment 2025: ವಸತಿ ಹಣಕಾಸು ಕ್ಷೇತ್ರದಲ್ಲಿ ರಾಷ್ಟ್ರಮಟ್ಟದಲ್ಲಿ ತನ್ನದೇ ಆದ ಹೆಸರು ಹೊಂದಿರುವ ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ತಮ್ಮ ಹಲವು ಯೋಜನೆಗಳ ನಿರ್ವಹಣೆಗಾಗಿ ವಿವಿಧ ಕಾನ್‌ಟ್ರಾಕ್ಟ್ ಆಧಾರಿತ ಹುದ್ದೆಗಳ ನೇಮಕಾತಿ ಪ್ರಕಟಿಸಿದೆ. ತಾಂತ್ರಿಕ ಜ್ಞಾನ, ಕಂಪ್ಯೂಟರ್ ಅಪ್ಲಿಕೇಶನ್, ಐಟಿ ಸೆಕ್ಯುರಿಟಿ, ರಿಸ್ಕ್ ಮ್ಯಾನೇಜ್ಮೆಂಟ್, ಲರ್ನಿಂಗ್ & ಡೆವಲಪ್ಮೆಂಟ್, ಅಪ್ಲಿಕೇಶನ್ ಡೆವಲಪರ್ ಮುಂತಾದ ವಿಭಾಗಗಳಲ್ಲಿ ಅರ್ಹ ಅಭ್ಯರ್ಥಿಗಳಿಗೆ ಈ ಅವಕಾಶ ದೊರೆಯುತ್ತಿದೆ.
NHB ದೇಶದ ಪ್ರಮುಖ ವಸತಿ ಹಣಕಾಸು ಸಂಸ್ಥೆಗಳ ಮೇಲೆ ನಿಗಾವಹಿಸಿ ಕಾನೂನು, ನಿಯಮ, ಮಾರ್ಗಸೂಚಿಗಳನ್ನು ಜಾರಿಗೆ ತರುತ್ತದೆ. ಈ ಹುದ್ದೆಗಳು ಶುದ್ಧ ಕಾನ್‌ಟ್ರಾಕ್ಟ್ ಆಧಾರಿತವಾಗಿದ್ದು, ಮಾನ್ಯ ಪ್ರಮಾಣ ಪತ್ರಗಳೊಂದಿಗೆ ಅನುಭವ ಇರುವ ಅಭ್ಯರ್ಥಿಗಳಿಗೆ ಉತ್ತಮ ವೇತನವೂ ಸಿಗಲಿದೆ.
| ಉದ್ಯೋಗ ವಿವರಗಳು | |
| ಇಲಾಖೆ ಹೆಸರು | ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) |
| ಹುದ್ದೆಗಳ ಹೆಸರು | ವಿವಿಧ ಹುದ್ದೆಗಳು |
| ಒಟ್ಟು ಹುದ್ದೆಗಳು | 10 |
| ಅರ್ಜಿ ಸಲ್ಲಿಸುವ ಬಗೆ | ಆನ್ಲೈನ್ (Online) |
| ಉದ್ಯೋಗ ಸ್ಥಳ – | ಭಾರತಾದ್ಯಂತ |
ಹುದ್ದೆಗಳ ಹೆಸರು
ಈ ಅಧಿಸೂಚನೆಯಡಿ ನಿಮ್ಮ ವಿದ್ಯಾರ್ಹತೆ ಮತ್ತು ಅನುಭವಕ್ಕೆ ತಕ್ಕಂತೆ ಈ ಕೆಳಗಿನ ಹುದ್ದೆಗಳಿವೆ:
- ಮುಖ್ಯ ತಂತ್ರಜ್ಞಾನ ಅಧಿಕಾರಿ
- ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ
- ಮುಖ್ಯ ಅಪಾಯ ನಿರ್ವಹಣಾಧಿಕಾರಿ
- ಲರ್ನಿಂಗ್ & ಡೆವಲಪ್ಮೆಂಟ್ ವಿಭಾಗದ ಮುಖ್ಯಸ್ಥ
- ಲರ್ನಿಂಗ್ & ಡೆವಲಪ್ಮೆಂಟ್ ವಿಭಾಗದ ಆಡಳಿತಾಧಿಕಾರಿ
- ಹಿರಿಯ ತೆರಿಗೆ ಅಧಿಕಾರಿ
- ಹಿರಿಯ ಅಪ್ಲಿಕೇಶನ್ ಡೆವಲಪರ್
- ಅಪ್ಲಿಕೇಶನ್ ಡೆವಲಪರ್
ಒಟ್ಟು 10 ಹುದ್ದೆಗಳು ಲಭ್ಯವಿವೆ.
ಶೈಕ್ಷಣಿಕ ವಿದ್ಯಾರ್ಹತೆ
ಮುಖ್ಯ ತಂತ್ರಜ್ಞಾನ ಅಧಿಕಾರಿ
- ಕಂಪ್ಯೂಟರ್ ಸೈನ್ಸ್, ಐಟಿ, ಸ್ಪೆಕ್ಸ್ & ಟೆಲಿಕಾಂ, ಇಲಿಕಲ್ ಇಂಜಿನಿಯರಿಂಗ್ ಅಥವಾ ಮಾಸ್ಟರ್ ಇನ್ ಕಂಪ್ಯೂಟರ್ ಅಪ್ಲಿಕೇಶನ್ (MCA) ಪದವಿ ಹೊಂದಿರಬೇಕು.
- ಕನಿಷ್ಠ 15 ವರ್ಷಗಳ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅನುಭವ ಅಗತ್ಯ.
ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ
- ಎಂಸಿಎ ಅಥವಾ ಕಂಪ್ಯೂಟರ್ ಅಥವಾ ಐಟಿ ಸಂಬಂಧಿತ ಪದವಿ ಹೊಂದಿರಬೇಕು.
- ಅಂತರರಾಷ್ಟ್ರೀಯ ಪ್ರಮಾಣ ಪತ್ರ ಹೊಂದಿರಬೇಕು (ಎಸ್‌ಎ/ಸಿಐಎಸ್‌ಎಂ/ಸಿಐಎಸ್‌ಎಸ್‌ಪಿ/ಸಿಸಿಎಸ್‌ಪಿ/ಸಿಡಿಪಿಎಸ್‌ಇ).
- ಕನಿಷ್ಠ 15 ವರ್ಷಗಳ ಸೈಬರ್ ಸೆಕ್ಯುರಿಟಿ ಮತ್ತು ಐಟಿ ಕ್ಷೇತ್ರದ ಅನುಭವ ಕಡ್ಡಾಯ.
ಮುಖ್ಯ ಅಪಾಯ ನಿರ್ವಹಣಾಧಿಕಾರಿ
- ಎಕಾನಾಮಿಕ್ಸ್, ಸ್ಟಾಟಿಸ್ಟಿಕ್ಸ್, ಫೈನಾನ್ಸ್, ಬಿಸಿನೆಸ್ ಅಡ್ಮಿನಿಸ್ಟ್ರೇಶನ್, ಪೂರಕವಾಗಿ CA ಅಥವಾ CS ಹೊಂದಿರಬೇಕು.
- ಬ್ಯಾಂಕಿಂಗ್/ಬಿಎಫ್‌ಎಸ್‌ಐ ಕ್ಷೇತ್ರದಲ್ಲಿ ಕನಿಷ್ಠ 20 ವರ್ಷಗಳ ಅನುಭವ ಕಡ್ಡಾಯ.
ಲರ್ನಿಂಗ್ & ಡೆವಲಪ್ಮೆಂಟ್ ಮುಖ್ಯಸ್ಥ
- ಸಂಬಂಧಿತ ಶಾಖೆಯಲ್ಲಿ ಸ್ನಾತಕೋತ್ತರ ಪದವಿ.
- ತರಬೇತುದಾರರಿಗೆ ತರಬೇತಿ ನೀಡಿ ಪ್ರಮಾಣ ಪತ್ರ ಮತ್ತು ಅನುಭವ ಇದ್ದರೆ ಉತ್ತಮ.
- ಲರ್ನಿಂಗ್ ಡೆವಲಪ್ಮೆಂಟ್/HR ವಿಭಾಗದಲ್ಲಿ ಸಾಕಷ್ಟು ಅನುಭವ ಅಗತ್ಯ.
ಲರ್ನಿಂಗ್ & ಡೆವಲಪ್ಮೆಂಟ್ ಆಡಳಿತಾಧಿಕಾರಿ
- ಪದವಿ ಅಥವಾ ಸ್ನಾತಕೋತ್ತರ ಪದವಿ (HR/ಟ್ರೇನಿಂಗ್/ವಯಸ್ಕ ಕಲಿಕೆ/ಸಾಂಸ್ಥಿಕ ಅಭಿವೃದ್ಧಿ) ಶಾಖೆಯಲ್ಲಿ.
- ಸರಿಯಾದ ಅನುಭವ ಕಡ್ಡಾಯ.
ಹಿರಿಯ ತೆರಿಗೆ ಅಧಿಕಾರಿ
- ಚಾರ್ಟರ್ಡ್ ಅಕೌಂಟೆಂಟ್ (CA) ಪ್ರಮಾಣ ಪತ್ರ ಕಡ್ಡಾಯ.
- ಕನಿಷ್ಠ 10 ವರ್ಷಗಳ ಟ್ಯಾಕ್ಸ್ ನಿರ್ವಹಣಾ ಅನುಭವ ಅಗತ್ಯ.
ಹಿರಿಯ ಅಪ್ಲಿಕೇಶನ್ ಡೆವಲಪರ್
- ಬಿಇ/ಬಿ.ಟೆಕ್/ಎಂಸಿಎ/ಎಂ.ಎಸ್ಸಿ.(ಸಿಎಸ್/ಐಟಿ) ಪದವಿ ಹೊಂದಿರಬೇಕು.
- ಕನಿಷ್ಠ 2–4 ವರ್ಷಗಳ ಅನುಭವ ಅಗತ್ಯ.
ಅಪ್ಲಿಕೇಶನ್ ಡೆವಲಪರ್
- ಬಿಇ/ಬಿ.ಟೆಕ್/ಎಂಸಿಎ/ಎಂ.ಎಸ್ಸಿ.(ಸಿಎಸ್/ಐಟಿ) ಶಾಖೆಯಲ್ಲಿ ವಿದ್ಯಾರ್ಹತೆ.
- ಕನಿಷ್ಠ 2–4 ವರ್ಷಗಳ ಆಪ್ಲಿಕೇಶನ್ ಡೆವಲಪ್ಮೆಂಟ್ ಅನುಭವ ಇರಬೇಕು.
ವಯೋಮಿತಿ
ಹುದ್ದೆಗಳ ಪ್ರಕಾರ- ಕನಿಷ್ಠಗರಿಷ್ಠ ವಯೋಮಿತಿ ವಿಭಿನ್ನವಾಗಿದೆ:
- ಮುಖ್ಯ ಅಧಿಕಾರಿಗಳು ಹುದ್ದೆಗಳು: 40 ರಿಂದ 55 ವರ್ಷಗಳು.
- ಮುಖ್ಯ ಅಪಾಯ ಅಧಿಕಾರಿ: ಗರಿಷ್ಠ 62 ವರ್ಷ.
- ಹಿರಿಯ ಅಪ್ಲಿಕೇಶನ್ ಡೆವಲಪರ್: 25–35 ವರ್ಷ.
- ಅಪ್ಲಿಕೇಶನ್ ಡೆವಲಪರ್: 23–32 ವರ್ಷ.
ಮೀಸಲು ವರ್ಗದ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ನಿಯಮಾನುಸಾರ ಎಸ್ಸಿ/ಎಸ್ಟಿಗೆ 5 ವರ್ಷ, ಓಬಿಸಿಗೆ 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ ಹೆಚ್ಚುವರಿ ವಿನಾಯಿತಿ ಲಭ್ಯ.
ವೇತನಶ್ರೇಣಿ
ಹೌಸಿಂಗ್ ಬ್ಯಾಂಕ್ (NHB) ವಿವಿಧ ಕಾನ್‌ಟ್ರಾಕ್ಟ್ ಹುದ್ದೆಗಳಿಗೆ ಸ್ಪರ್ಧಾತ್ಮಕವಾಗಿ ಉತ್ತಮ ಏಕೀಕೃತ ವೇತನ ನಿಗದಿಪಡಿಸಿದೆ. ಹುದ್ದೆಯ ವಾರ ವೇತನ ಶ್ರೇಣಿ ಹೀಗಿದೆ:
- ಮುಖ್ಯ ಅಧಿಕಾರಿ
ಮಾಸಿಕ ವೇತನ: ರೂ. 5,00,000/- ವರೆಗೆ - ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ
ಮಾಸಿಕ ವೇತನ: ರೂ. 5,00,000/- ವರೆಗೆ - ಮುಖ್ಯ ಅಪಾಯ ನಿರ್ವಹಣಾಧಿಕಾರಿ
ಮಾಸಿಕ ವೇತನ: ರೂ. 5,00,000/- ವರೆಗೆ - ಲರ್ನಿಂಗ್ & ಡೆವಲಪ್ಮೆಂಟ್ ಮುಖ್ಯಸ್ಥ
ಮಾಸಿಕ ವೇತನ: ರೂ. 3,50,000/- ವರೆಗೆ - ಲರ್ನಿಂಗ್ & ಡೆವಲಪ್ಮೆಂಟ್ ಆಡಳಿತಾಧಿಕಾರಿ
ಮಾಸಿಕ ವೇತನ: ರೂ. 2,50,000/- ವರೆಗೆ - ಹಿರಿಯ ತೆರಿಗೆ ಅಧಿಕಾರಿ
ಮಾಸಿಕ ವೇತನ: ರೂ. 2,00,000/- ವರೆಗೆ - ಹಿರಿಯ ಅಪ್ಲಿಕೇಶನ್ ಡೆವಲಪರ್
ಮಾಸಿಕ ವೇತನ: ರೂ. 1,25,000/- ವರೆಗೆ - ಅಪ್ಲಿಕೇಶನ್ ಡೆವಲಪರ್
ಮಾಸಿಕ ವೇತನ: ರೂ. 85,000/- ವರೆಗೆ
ಅರ್ಜಿ ಶುಲ್ಕ
ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ನ ಈ ನೇಮಕಾತಿಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ:
ವರ್ಗವಾರು ಅರ್ಜಿ ಶುಲ್ಕ ವಿವರ:
- ➤ ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ:
ರೂ. 175/- (ಇಂಟಿಮೇಶನ್ ಚಾರ್ಜಸ್ ಮಾತ್ರ) - ➤ ಇತರ ಎಲ್ಲ ವರ್ಗಗಳ ಅಭ್ಯರ್ಥಿಗಳಿಗೆ (ಸಾಮಾನ್ಯ, ಒಬಿಸಿ, ಮಾಜಿ ಸೈನಿಕ):
ರೂ. 850/- (ಅರ್ಜಿ ಶುಲ್ಕ + ಇಂಟಿಮೇಶನ್ ಚಾರ್ಜಸ್ ಸೇರಿ)

ಆಯ್ಕೆ ವಿಧಾನ
ಹೌಸಿಂಗ್ ಬ್ಯಾಂಕ್ (NHB) ತಮ್ಮ ಮುಖ್ಯ ಅಧಿಕಾರಿಗಳು, ಹಿರಿಯ ಅಧಿಕಾರಿಗಳು, ಅಪ್ಲಿಕೇಶನ್ ಡೆವಲಪರ್‌ಗಳು ಹುದ್ದೆಗಳಿಗೆ ಆಯ್ಕೆ ಪರಿಪೂರ್ಣ ಪಟ್ಟಿಯನ್ನು ಹಂತ ಹಂತವಾಗಿ ನಡೆಸುತ್ತದೆ. ಈ ಪ್ರಕ್ರಿಯೆಯ ಅಭ್ಯರ್ಥಿಗಳ ಅರ್ಹತೆ, ಅನುಭವ, ಶಾರ್ಟ್ಲಿಸ್ಟಿಂಗ್ ಮತ್ತು ವೈಯಕ್ತಿಕ ಸಂದರ್ಶನದ ಮೂಲಕ ನಡೆಯುತ್ತಿದೆ.
ಅರ್ಜಿ ಪರಿಶೀಲನೆ
ಅಭ್ಯರ್ಥಿಗಳಿಂದ ಬಂದ ಅರ್ಜಿಗಳನ್ನು HR ವಿಭಾಗವು ಸಂಪೂರ್ಣ ಪರಿಶೀಲನೆ ಮಾಡಿ ಅರ್ಹತೆ, ವಿದ್ಯಾರ್ಹತೆ, ಅನುಭವದ ದಾಖಲೆಗಳನ್ನು ತಾಳಿಕೆ ಹಾಕಿ ಪರಿಶೀಲಿಸುತ್ತದೆ.
ಶಾರ್ಟ್‌ಲಿಸ್ಟಿಂಗ್
ಅರ್ಜಿ ಪರಿಶೀಲನೆಯ ಬಳಿಕ, ಅರ್ಹ ಅಭ್ಯರ್ಥಿಗಳ ಪೈಕಿ ಅತ್ಯುತ್ತಮ ಅರ್ಹತೆ ಮತ್ತು ಅನುಭವ ಹೊಂದಿರುವವರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಈ ಹಂತದಲ್ಲಿ ಬ್ಯಾಂಕ್ ಆಯ್ಕೆ ಸಮಿತಿ ತಮ್ಮ ಆಂತರಿಕ ನಿಯಮದ ಆಧಾರದಲ್ಲಿ ಅಭ್ಯರ್ಥಿಗಳನ್ನು ಆರಿಸುತ್ತದೆ.
ವೈಯಕ್ತಿಕ ಸಂದರ್ಶನ
ಶಾರ್ಟ್‌ಲಿಸ್ಟ್ ಆದ ಅಭ್ಯರ್ಥಿಗಳಿಗೆ ಇ-ಮೇಲ್ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ಸಂದರ್ಶನದ ಕರೆ ಪತ್ರ ಕಳುಹಿಸಲಾಗುತ್ತದೆ. ಸಂದರ್ಶನದಲ್ಲಿ ಅಭ್ಯರ್ಥಿಯ ತಾಂತ್ರಿಕ ಜ್ಞಾನ, ಕ್ಷೇತ್ರದ ಅನುಭವ, ಸಮಸ್ಯೆ ಪರಿಹಾರ ಸಾಮರ್ಥ್ಯ ಮತ್ತು ನಾಯಕತ್ವ ಗುಣಗಳನ್ನು ಪರಿಶೀಲಿಸಲಾಗುತ್ತದೆ.
ದಾಖಲೆ ಪರಿಶೀಲನೆ
ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿಗಳು ತಮ್ಮ ಮೂಲ ದಾಖಲೆಗಳನ್ನು (ವಿದ್ಯಾರ್ಹತೆ, ಅನುಭವ ಪತ್ರ, ವಯೋಮಿತಿ ದೃಢೀಕರಣ, ವರ್ಗ ಪ್ರಮಾಣ ಪತ್ರ) ಕಡ್ಡಾಯವಾಗಿ ತರುತ್ತಾರೆ.
ಅಂತಿಮ ಆಯ್ಕೆ ಪಟ್ಟಿ
ಸಂದರ್ಶನದಲ್ಲಿ ಪ್ರಾಬಲ್ಯ ಪ್ರದರ್ಶಿಸಿದ ಅಭ್ಯರ್ಥಿಗಳ ಅಂತಿಮ ಆಯ್ಕೆ ಪಟ್ಟಿಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್ (NHB) ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ.
ಪ್ರಶ್ನೋತ್ತರಗಳು (FAQs)
- ಹೌಸಿಂಗ್ ಬ್ಯಾಂಕ್ (NHB) ಯಾವ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿದೆ?
➜ ಮುಖ್ಯ ತಂತ್ರಜ್ಞಾನ ಅಧಿಕಾರಿ, ಮುಖ್ಯ ಮಾಹಿತಿ ಭದ್ರತಾ ಅಧಿಕಾರಿ, ಮುಖ್ಯ ಅಪಾಯ ಅಧಿಕಾರಿ, ಮುಖ್ಯಸ್ಥ – ಕಲಿಕೆ ಮತ್ತು ಅಭಿವೃದ್ಧಿ, ನಿರ್ವಾಹಕರು – L&D, ಹಿರಿಯ ತೆರಿಗೆ ಅಧಿಕಾರಿ, ಹಿರಿಯ ಅಪ್ಲಿಕೇಶನ್ ಡೆವಲಪರ್, ಅಪ್ಲಿಕೇಶನ್ ಡೆವಲಪರ್ ಹುದ್ದೆಗಳಿಗೆ. - ಒಟ್ಟು ಎಷ್ಟು ಹುದ್ದೆಗಳು ಲಭ್ಯವಿವೆ?
➜ ಒಟ್ಟು 10 ಕಾನ್‌ಟ್ರಾಕ್ಟ್ ಹುದ್ದೆಗಳು ಲಭ್ಯವಿವೆ. - ವಿದ್ಯಾರ್ಹತೆ ಏನು ಅಗತ್ಯ?
➜ ಹುದ್ದೆ ಪ್ರಕಾರ ಬಿಐ/ಬಿ.ಟೆಕ್/ಎಂಸಿಎ/ಎಂಎಸ್ಸಿ., ಸಿಎ, ಸ್ಟಾಟಿಸ್ಟಿಕ್ಸ್/ಫೈನಾನ್ಸ್/ಎಚ್‌ಆರ್ ಸ್ನಾತಕೋತ್ತರ ಪದವಿ ಅಗತ್ಯ. ಜೊತೆಗೆ 2 ವರ್ಷಗಳಿಂದ 20 ವರ್ಷಗಳ ಅನುಭವದವರೆಗೂ ಇದೆ. - ಗರಿಷ್ಠ ವಯೋಮಿತಿ ಎಷ್ಟು?
➜ ಮುಖ್ಯ ಅಧಿಕಾರಿಗಳಿಗೆ ಗರಿಷ್ಠ 55 ವರ್ಷ, ಮುಖ್ಯ ಅಪಾಯ ಅಧಿಕಾರಿಗೆ ಗರಿಷ್ಠ 62 ವರ್ಷ, ಡೆವಲಪರ್‌ಗಳಿಗೆ ಗರಿಷ್ಠ 32–35 ವರ್ಷ. - ಅರ್ಜಿ ಶುಲ್ಕವಿದೆಯೇ?
➜ ಹೌದು. ಎಸ್ಸಿ/ಎಸ್ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ರೂ. 175/- ಮತ್ತು ಇತರ ಅಭ್ಯರ್ಥಿಗಳಿಗೆ ರೂ. 850/-. - ವೇತನ ಶ್ರೇಣಿ ಎಷ್ಟು?
➜ ಹುದ್ದೆಗನುಗುಣವಾಗಿ ರೂ. 85,000/- ರಿಂದ ರೂ. 5 ಲಕ್ಷದವರೆಗೆ ಏಕೀಕೃತ ಮಾಸಿಕ ವೇತನ ನಿಗದಿಯಾಗಿದೆ. - ಆಯ್ಕೆ ವಿಧಾನ ಹೇಗಿರುತ್ತದೆ?
➜ ಅರ್ಜಿ ಪರಿಶೀಲನೆ, ಶಾರ್ಟ್‌ಲಿಸ್ಟಿಂಗ್ ಮತ್ತು ವೈಯಕ್ತಿಕ ಸಂದರ್ಶನ ಆಧಾರಿತ ಆಯ್ಕೆ ಪ್ರಕ್ರಿಯೆ. - ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವುದು?
➜ ಅರ್ಜಿ ಸಲ್ಲಿಸಲು ಕೊನೆ ದಿನಾಂಕ 22-07-2025. - ಅರ್ಜಿ ಸಲ್ಲಿಕೆ ಆನ್‌ಲೈನ್ ಅಥವಾ ಆಫ್‌ಲೈನ್?
➜ ಅರ್ಜಿ ಸಲ್ಲಿಕೆ ಸಂಪೂರ್ಣವಾಗಿ ಆನ್‌ಲೈನ್ ವಿಧಾನದಲ್ಲೇ ನಡೆಯುತ್ತಿದೆ. ಅರ್ಜಿ ಶುಲ್ಕ ಪಾವತಿಯೂ ಆನ್‌ಲೈನ್ ಮೂಲಕವೇ ಆಗಬೇಕು. - ಅಧಿಕೃತ ವೆಬ್‌ಸೈಟ್ ಯಾವುದು?
➜ ಅಧಿಕೃತ ವೆಬ್‌ಸೈಟ್: www.nhb.org.in
| ಇದನ್ನೂ ಓದಿ |
| ಕರ್ನಾಟಕದಲ್ಲಿ ಹೊಸ ಉದ್ಯೋಗಾಕಾಂಶಗಳು 2025 |
| ಕೇಂದ್ರದಲ್ಲಿ ಹೊಸ ಉದ್ಯೋಗಾಕಾಂಶಗಳು 2025 |
| ಹೊಸ ಸರ್ಕಾರಿ ಯೋಜನೆಗಳು (Govt Schemes) |
ಪ್ರಮುಖ ದಿನಾಂಕಗಳು
- ಅಧಿಸೂಚನೆ ಪ್ರಕಟಣೆ ದಿನಾಂಕ:
➜ 09-07-2025 - ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
➜ 09-07-2025 ರಿಂದ ಅಧಿಕೃತ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಆರಂಭ. - ಅರ್ಜಿ ಸಲ್ಲಿಕೆ ಕೊನೆ ದಿನಾಂಕ:
➜ 22-07-2025 (ಮಧ್ಯರಾತ್ರಿ 11:59 ಗಂಟೆಗೆ ಮುಕ್ತಾಯ) - ಅರ್ಜಿ ಶುಲ್ಕ ಪಾವತಿ ಕೊನೆ ದಿನಾಂಕ:
➜ ಅರ್ಜಿ ಸಲ್ಲಿಕೆಯ ಕೊನೆ ದಿನಾಂಕದೊಂದಿಗೆ ಒಂದೇ ದಿನ – 22-07-2025. - ಶಾರ್ಟ್‌ಲಿಸ್ಟ್/ಸಂದರ್ಶನದ ತಾತ್ಕಾಲಿಕ ವೇಳಾಪಟ್ಟಿ:
➜ ಅರ್ಜಿ ಪರಿಶೀಲನೆಯ ನಂತರ ಶಾರ್ಟ್‌ಲಿಸ್ಟ್ ಪಟ್ಟಿ ಪ್ರಕಟಣೆ ಹಾಗೂ ಸಂದರ್ಶನದ ತಾರೀಖುಗಳನ್ನು www.nhb.org.in ನಲ್ಲಿ ಪ್ರಕಟಿಸಲಾಗುತ್ತದೆ.
ಪ್ರಮುಖ ಲಿಂಕ್
🔗 ಅಧಿಸೂಚನೆ PDF ಡೌನ್‌ಲೋಡ್ ಲಿಂಕ್:
NHB Notification 2025 PDF
🔗 ಅಧಿಕೃತ ವೆಬ್‌ಸೈಟ್ ಲಿಂಕ್:
ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಧಿಕೃತ ವೆಬ್‌ಸೈಟ್

